ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಜಿಲ್ಲಾ ಕಸಾಪ: ಮಂಗಲಾ ಮೆಟಗುಡ್ಡ ಪುನರಾಯ್ಕೆ

Last Updated 21 ನವೆಂಬರ್ 2021, 16:05 IST
ಅಕ್ಷರ ಗಾತ್ರ

ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಂಗಲಾ ಮೆಟಗುಡ್ಡ ಅವರು ಭಾನುವಾರ ನಡೆದ ಚುನಾವಣೆಯಲ್ಲಿ ಪುನರಾಯ್ಕೆಯಾದರು.

ಬೈಲಹೊಂಗಲದವರಾದ ಅವರು, ಕಸಾಪ ಜಿಲ್ಲಾ ಘಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 2 ಬಾರಿ ಗೆದ್ದ ದಾಖಲೆಗೆ ಪಾತ್ರವಾಗಿದ್ದಾರೆ. ಬಿಜೆಪಿ ಮುಖಂಡ ಹಾಗೂ ಕೆಎಲ್‌ಇ‌ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ‌ ಕೋರೆ ಹಾಗೂ ಜಿಲ್ಲೆಯ ಸಾಹಿತಿಗಳ ಬೆಂಬಲದಿಂದಾಗಿ ಅತಿ ಹೆಚ್ಚು ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೆ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.

ಮಂಗಲಾ ಅವರು 4,935 ಮತಗಳನ್ನು ಪಡೆದಿದ್ದಾರೆ. ಪ್ರತಿಸ್ಪರ್ಧಿಗಳಾದ ಗೋಕಾಕದ ಕನ್ನಡಪರ ಹೋರಾಟಗಾರ ಬಸವರಾಜ ಖನಾಪ್ಪನವರ 1,156 ಮತ್ತು ವಕೀಲ ರವೀಂದ್ರ ತೋಟಗೇರ 582 ಮತಗಳನ್ನು ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. ಕಣದಿಂದ ಹಿಂದೆ ಸರಿದು ಮಂಗಲಾ ಅವರಿಗೆ ಬೆಂಬಲ ಘೋಷಿಸಿದ್ದ ಸುರೇಶ ಮರಲಿಂಗನ್ನವರ ಅವರಿಗೆ 41 ಮತಗಳು ಬಂದಿವೆ. ಮಂಗಲಾ ಅವರಿಗೆ ಬೈಲಹೊಂಗಲದಲ್ಲಿ ಅತಿ‌ ಹೆಚ್ಚು ಅಂದರೆ 1,188 ಮತಗಳು ದೊರೆತಿವೆ. ತ್ರಿಕೋನ ಸ್ಪರ್ಧೆಯಲ್ಲಿ ಅವರು ಮುನ್ನಡೆ ಗಳಿಸಿದ್ದಾರೆ.

ಜಿಲ್ಲೆಯ ಎಲ್ಲ ತಹಶೀಲ್ದಾರರ ಕಚೇರಿಗಳು, ಬೈಲಹೊಂಗಲ ತಾಲ್ಲೂಕಿನ ನೇಸರಗಿ ಹಾಗೂ ರಾಮದುರ್ಗ ತಾಲ್ಲೂಕಿನ ಚಂದರಗಿಯ ನಾಡ ಕಚೇರಿಗಳಲ್ಲಿ ಸೇರಿದಂತೆ ಒಟ್ಟು 21 ಮತಗಟ್ಟೆಗಳಲ್ಲಿ ಮತದಾನ ನಡೆಯಿತು.

'12,599 ಪುರುಷರು ಹಾಗೂ 3,177 ಮಹಿಳೆಯರು ಮತ್ತು 4 ಅಂಗ ಸಂಸ್ಥೆಗಳವರು ಸೇರಿದಂತೆ ಒಟ್ಟು 15,780 ಮತದಾರರ ಪೈಕಿ 5,617 ಪುರುಷರು ಹಾಗೂ 1,188 ಮಹಿಳೆಯರು ಸೇರಿ 6,805 ಮಂದಿ ಮತ ಚಲಾಯಿಸಿದರು. ಶೇ 43.12ರಷ್ಟು ಮತದಾನವಾಗಿದೆ. 91 ಮತಗಳು ತಿರಸ್ಕೃತವಾಗಿವೆ. ಮತದಾನ ಶಾಂತಿಯುತವಾಗಿ ನಡೆದಿದೆ' ಎಂದು ಚುನಾವಣಾಧಿಕಾರಿಯಾಗಿದ್ದ ಬೆಳಗಾವಿ ತಹಶೀಲ್ದಾರ್‌ ಆರ್.ಕೆ. ಕುಲಕರ್ಣಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT