ತಲ್ಲೂರ (ಬೆಳಗಾವಿ ಜಿಲ್ಲೆ): ಗ್ರಾಮದಲ್ಲಿ ಕಾರ ಹುಣ್ಣಿಮೆ ಹಬ್ಬವನ್ನು ಕರಿ ಹರಿಯುವ ಮೂಲಕ ರೈತರು ಸರಳವಾಗಿ ಶುಕ್ರವಾರ ಆಚರಿಸಿದರು.
ದೇಸಾಯಿ ಮನೆತನದವರು ಪ್ರತಿ ವರ್ಷದಂತೆ ಈ ವರ್ಷವೂ ಎತ್ತುಗಳನ್ನು ಬೇವು ಹಾಗೂ ಮಾವಿನ ಎಲೆಗಳ ಹಾರದಿಂದ ಸಿಂಗರಿಸಿ ಪೂಜಿಸಿದರು. ನಂತರ ಜೋಡೆತ್ತುಗಳನ್ನು ಅಗಸಿಯಿಂದ ದೇಸಾಯಿಯವರ ವಾಡೆಯವರೆಗೆ ಮೆರವಣಿಗೆ ನಡೆಸಿದರು.
‘ಬಿಳಿ ಎತ್ತು ಕರಿ ಹರಿದಿದ್ದು, ಹಿಂಗಾರಿ ಜೋಳದ ಬೆಳೆ ಸಮೃದ್ಧವಾಗಿ ಬರಲಿದೆ. ಉತ್ತಮ ಇಳುವರಿ ಸಿಗಲಿದೆ’ ಎಂದು ರೈತರು ವಿಶ್ವಾಸ ವ್ಯಕ್ತಪಡಿಸಿದರು.