ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಆರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್‌ಗೆ ಪಿನಾಕಲ್ ಪ್ರಶಸ್ತಿ

Last Updated 22 ಜುಲೈ 2019, 12:29 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೆಎಲ್‌ಎಸ್– ಐಎಂಆರ್ ಟೋಸ್ಟ್ ಮಾಸ್ಟರ್ಸ್‌ ಕ್ಲಬ್ 2018–19ನೇ ಸಾಲಿನ ‘ಪಿನಾಕಲ್ ಪ್ರಶಸ್ತಿ’ ಪಡೆದಿದೆ.

ಜೂನ್ 30ಕ್ಕೆ ಮುನ್ನ ಕ್ಲಬ್ ಡಿಸ್ಟಿಂಗ್ವಿಶ್ಡ್ ಸ್ಥಾನಮಾನ ಸಾಧಿಸಿದಾಗ ಈ ಪ್ರಶಸ್ತಿ ನೀಡಲಾಗುತ್ತದೆ. ಯಾವುದೇ ಉದ್ಯಮ ಯಶಸ್ಸು ಸಾಧಿಸಲು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಶ್ಯವಾಗಿರುವ ಸಂವಹನ ಕೌಶಲಗಳು, ಸಾರ್ವಜನಿಕ ಭಾಷಣ ಮತ್ತು ನಾಯಕತ್ವದ ಗುಣಗಳನ್ನು ಅಭಿವೃದ್ಧಿಪಡಿಸುವ ವೇದಿಕೆ ಒದಗಿಸುವ ಉದ್ದೇಶದಿಂದ ಟೋಸ್ಟ್ ಮಾಸ್ಟರ್ಸ್ ಆಂದೋಲನವನ್ನು ಕೆಎಲ್‌ಎಸ್ ಐಎಂಇಆರ್‌ನಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಯಿತು. 6 ತಿಂಗಳುಗಳ ಒಳಗೆ ಪ್ರಶಸ್ತಿ ಗಳಿಸಿದೆ.

ಟೋಸ್ಟ್ ಮಾಸ್ಟರ್ಸ್ ಕ್ಲಬ್ ಎನ್ನುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಮತ್ತು ಸ್ವಯಂಚಾಲಿತ, ಶೈಕ್ಷಣಿಕ ಸಂಸ್ಥೆಯಾಗಿದೆ. ಕ್ಲಬ್ ಪ್ರತಿ ಸೋಮವಾರ ಸಂಜೆ 5.30ರಿಂದ ಸಂಜೆ 6.30ರವರೆಗೆ ನಿಯಮಿತವಾಗಿ ಸಭೆ ನಡೆಯುತ್ತದೆ. ಮಾತನಾಡುವ ಕೌಶಲ ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ಬಯಸುವವರಿಗೆ ಸದಸ್ಯತ್ವ ಮುಕ್ತವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಮೊ:9844086695 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT