ಬೆಳಗಾವಿ: ‘ದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಇನ್ನೂ ರಾಮರಾಜ್ಯ ನಿರ್ಮಾಣವಾಗಬೇಕಿದೆ. ಭಾರತವನ್ನು ಸುಸಂಸ್ಕೃತ ರಾಷ್ಟ್ರವಾಗಿ ಕಟ್ಟುವ ಕೆಲಸವಾಗಬೇಕಿದೆ’ ಎಂದು ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಸಂಯುಕ್ತ ಮಹಾಮಂತ್ರಿ ಗೋಪಾಲ ಹೇಳಿದರು.

ಲಿಂಗರಾಜ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ವಿಜಯದಶಮಿ ಪ್ರಯುಕ್ತ ಭಾನುವಾರ ಸಂಜೆ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿ ಪ್ರತಿಯೊಬ್ಬರಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಯಬೇಕಿದೆ. ಮಾತೃಭೂಮಿ ಹಾಗೂ ಗೋವುಗಳನ್ನು ರಕ್ಷಿಸುವ ಕೆಲಸವಾಗಬೇಕಿದೆ’ ಎಂದರು.

‘ಇಂದು ಮತಾಂತರದ ಮೂಲಕ ಸಮಾಜ ಒಡೆಯುವ ಕೆಲಸವಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ದೌರ್ಜನ್ಯ ಮೆರೆದವರ ಮೇಲೆ ಯಾವ ಕ್ರಮವಾಗುತ್ತಿಲ್ಲ. ಬಾಂಗ್ಲಾದೇಶದಲ್ಲೂ ಆಕ್ರಮಣ, ಅತ್ಯಾಚಾರ ನಡೆಯುತ್ತಿವೆ. ಅನ್ಯಾಯದ ವಿರುದ್ಧ ನಾವು ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ’ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಅಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ, ‘ಸಮಾಜ ಮತ್ತು ಸಂಸ್ಕೃತಿ ಉಳಿಸಿ, ಬೆಳೆಸುವುದು ನಮ್ಮ ಜವಾಬ್ದಾರಿ. ದೇಶದಲ್ಲಿ ಆರ್ಎಸ್ಎಸ್ ಸಾಮರಸ್ಯ, ಬಂಧುತ್ವ ಮತ್ತು ಸಂಸ್ಕೃತಿ ಬೆಳೆಸುವ ಕೆಲಸ ಮಾಡುತ್ತಿದೆ. ಬಂಧುತ್ವದ ಮೂಲಕವೇ ಭಾರತವನ್ನು ಜಗತ್ತಿನ ಬಲಾಢ್ಯ ರಾಷ್ಟ್ರವಾಗಿಸಬೇಕಿದೆ’ ಎಂದರು.

‘ನಾವು ಶಕ್ತಿ, ಸಂಘಟನೆ ಮತ್ತು ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಬೇಕಿದೆ. ಸಮೃದ್ಧ ಭಾರತ ನಿರ್ಮಾಣದಕ್ಕಾಗಿ ಪ್ರತಿಯೊಬ್ಬರೂ ಶ್ರಮವಹಿಸಿ ದುಡಿಯಬೇಕಿದೆ. ನಮ್ಮ ಬೆವರಿನ ಹನಿಯನ್ನೇ ರಾಷ್ಟ್ರಕ್ಕೆ ಕೊಡುಗೆಯಾಗಿ ಅರ್ಪಿಸಬೇಕಿದೆ’ ಎಂದು ಕರೆಕೊಟ್ಟರು.

‘ಪ್ರತಿಯೊಬ್ಬರೂ ಹೆತ್ತವರಿಗೆ ಗೌರವ ಕೊಡಬೇಕಿದೆ. ಸನಾತನ ತತ್ವ ಅಳವಡಿಸಿಕೊಳ್ಳಬೇಕಿದೆ. ಆಗ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಇಂದು ಅಸ್ಪೃಶ್ಯತೆ, ಅಸಮಾನತೆ ನಿವಾರಣೆಯಾಗಬೇಕಿದೆ. ಇದಕ್ಕಾಗಿಯೇ ಆರ್ಎಸ್ಎಸ್ ಶ್ರಮಿಸುತ್ತಿದೆ. ಜನರಿಗೆ ಬಂಧುತ್ವದ ಪಾಠ ಮಾಡುತ್ತಿದೆ’ ಎಂದರು.

ಎಂ.ವೈ.ಹಾರೂಗೇರಿ ಇತರರಿದ್ದರು.

ಗಮನಸೆಳೆದ ಪಥಸಂಚಲನ: ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್ಎಸ್ಎಸ್) ಸದಸ್ಯರು ವಿಜಯದಶಮಿ ಪ್ರಯುಕ್ತ, ಭಾನುವಾರ ನಡೆಸಿದ ಆಕರ್ಷಕ ಪಥಸಂಚಲನ ಗಮನಸೆಳೆಯಿತು.

ಇಲ್ಲಿನ ಸರ್ಕಾರಿ ಸರದಾರ್ಸ್ ಪ್ರೌಢಶಾಲೆ ಮೈದಾನಂದ ಆರಂಭಗೊಂಡ ಪಥಸಂಚಲನವು ವಿವಿಧ ಮಾರ್ಗಗಳಲ್ಲಿ ಸಾಗಿ, ಕಾಲೇಜು ರಸ್ತೆಯ ಲಿಂಗರಾಜ ಕಾಲೇಜು ಆವರಣ ತಲುಪಿತು.

ರಂಗೋಲಿ ಚಿತ್ತಾರ ಅರಳಿದ್ದ ಪಥಸಂಚಲನದ ಮಾರ್ಗದಲ್ಲಿ ಗಣವೇಷಧಾರಿಗಳು ಹುಮ್ಮಸ್ಸಿನಿಂದ ಹೆಜ್ಜೆಹಾಕಿದರು. ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಠಿ ಮಾಡಿ, ಭಾರತಾಂಬೆ ಪರವಾಗಿ ಜೈಕಾರ ಕೂಗಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.