ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣಸೌಧ | ಕುಡುಕ ಎನ್ನಬೇಡಿ ಮದ್ಯಪ್ರಿಯ ಎನ್ನಿ: ಹೋರಾಟಗಾರರ ಆಗ್ರಹ

Published 14 ಡಿಸೆಂಬರ್ 2023, 13:54 IST
Last Updated 14 ಡಿಸೆಂಬರ್ 2023, 13:54 IST
ಅಕ್ಷರ ಗಾತ್ರ

ಬೆಳಗಾವಿ: ‘ಕುಡುಕ’ ಎಂಬ ಪದವನ್ನು ನಿಷೇಧಿಸಿ, ‘ಮದ್ಯಪ್ರಿಯ’ ಎಂಬ ಪದ ಬಳಸುವಂತೆ ಒತ್ತಾಯಿಸಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದವರು ಗುರುವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

‘ನಿತ್ಯ ದುಡಿ. ಸತ್ಯ ನುಡಿ. ಸ್ವಲ್ಪ ಕುಡಿ. ಮನೆಗೆ ನಡಿ’ ಎಂಬ ಘೋಷವಾಕ್ಯ ಕೂಗಿದ ಅವರು, ‘ಡಿಸೆಂಬರ್ 31 ಅನ್ನು ‘ಮದ್ಯಪಾನ ಪ್ರಿಯರ ದಿನ’ ಎಂದು ಘೋಷಿಸಲು ಆಗ್ರಹಿಸಿದರು. ಮದ್ಯಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಿ, ಮದ್ಯ ಮಾರಾಟದಿಂದ ಬರುವ ಆದಾಯದಲ್ಲಿ ಶೇ 10ರಷ್ಟು ಆ ನಿಧಿಗೆ ಮೀಸಲಿಡಬೇಕು. ಮದ್ಯ ಸೇವಿಸಿ ಮೃತಪಟ್ಟ ವ್ಯಕ್ತಿಗೆ ₹10 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರಿಂದ ಮನವಿಪತ್ರ ಸ್ವೀಕರಿಸಿದ ಸಚಿವ ಸಂತೋಷ ಲಾಡ್, ‘ನಿಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವೆ’ ಎಂದರು.

ಸಂಘದ ಅಧ್ಯಕ್ಷ ವೆಂಕಟೇಶಗೌಡ ಬೋರೆಹಳ್ಳಿ, ಪ್ರಧಾನ ಕಾರ್ಯದರ್ಶಿ ರಾಮಸ್ವಾಮಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT