ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಬೆಳಗಾವಿ: ಮುನಿಸಿಕೊಂಡಿದ್ದ ಯಾದವಾಡ ಮನವೊಲಿಸಿದ ಶೆಟ್ಟರ್‌

Published 5 ಏಪ್ರಿಲ್ 2024, 16:17 IST
Last Updated 5 ಏಪ್ರಿಲ್ 2024, 16:17 IST
ಅಕ್ಷರ ಗಾತ್ರ

ರಾಮದುರ್ಗ(ಬೆಳಗಾವಿ ಜಿಲ್ಲೆ): ಕಳೆದ ಸಲ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ವಂಚಿತರಾಗಿ ಮುನಿಸಿಕೊಂಡಿದ್ದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ನಿವಾಸಕ್ಕೆ ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಶುಕ್ರವಾರ ಭೇಟಿ ನೀಡಿ ಮನವೊಲಿಸಿದರು. ಈ ಮೂಲಕ, ‘ಮಹಾದೇವಪ್ಪ ಯಾದವಾಡ ಕಾಂಗ್ರೆಸ್‌ ಸೇರುತ್ತಾರೆ’ ಎಂಬ ಸುದ್ದಿಗೆ ತೆರೆ ಎಳೆದರು.

‘ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ. ರಾಮದುರ್ಗ ವಿಧಾನಸಭೆ ಕ್ಷೇತ್ರದಿಂದ ಹೆಚ್ಚಿನ ಮತಗಳ ಮುನ್ನಡೆ ನೀಡಿ’ ಎಂದು ಕೋರಿದರು. ಇದಕ್ಕೆ ಸಮ್ಮತಿ ಸೂಚಿಸಿದ ಯಾದವಾಡ, ‘ಬೆಳಗಾವಿಯಲ್ಲಿ ಜಿಲ್ಲಾ ನಾಯಕರಷ್ಟೇ  ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಕೆಳಹಂತದ ನಾಯಕರ ಸಲಹೆ ಪಡೆಯಿರಿ’ ಎಂದರು.

‘ಜಗದೀಶ ಶೆಟ್ಟರ್‌ ಪಕ್ಷದಲ್ಲಿರುವ ನ್ಯೂನತೆ ಸರಿಪಡಿಸಬೇಕು. ಸಮನ್ವಯ ಸಮಿತಿ ಸಭೆ ನಡೆಸಿ, ಎಲ್ಲರಲ್ಲಿ ಒಗ್ಗಟ್ಟು ಮೂಡಿಸಬೇಕು. ಕೆಲವರು ದಾರಿ ತಪ್ಪಿಸಿ, ನಮ್ಮ ಮೇಲೆ ಗೂಬೆ ಕೂರಿಸುವ ಸಾಧ್ಯತೆ ಇದೆ. ಹೀಗಾಗಿ ರಾಮದುರ್ಗಕ್ಕೆ ಬರುವಾಗ ನಮಗೂ ಮಾಹಿತಿ ನೀಡಬೇಕು. ಎಚ್ಚರದಿಂದ ಪ್ರವಾಸಪಟ್ಟಿ ಸಿದ್ಧಪಡಿಸಬೇಕು’ ಎಂದರು.

‘ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಚುನಾವಣೆ ಎದುರಿಸುವೆ’ ಎಂದು ಶೆಟ್ಟರ್‌ ಭರವಸೆ ನೀಡಿದರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ಸುಭಾಷ ಪಾಟೀಲ, ಡಾ.ಕೆ.ವಿ.ಪಾಟೀಲ, ರಾಜೇಶ ಬೀಳಗಿ, ಶಂಕರ ಮಾಡಲಗಿ, ಶಿವಣ್ಣ ಅಂಗಡಿ ಇದ್ದರು.

ಆಕ್ಷೇಪ: ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ನಿವಾಸಕ್ಕೆ ತೆರಳಿದ ನಂತರ, ಬಿಜೆಪಿ ಕಚೇರಿಗೆ ಶೆಟ್ಟರ್‌ ಹೋದರು. ಆಗ, ಬಿಜೆಪಿ ಮುಖಂಡ ಚಿಕ್ಕರೇವಣ್ಣ ಅವರ ಬೆಂಬಲಿಗರು ಗದ್ದಲ ಸೃಷ್ಟಿಸಿದರು. ‘ಈ ವಿಧಾನಸಭೆಯಲ್ಲಿ ಪರಾಭವಗೊಂಡ ಚಿಕ್ಕರೇವಣ್ಣ ಅವರ ಭೇಟಿಗೆ ಮುನ್ನ, ಬಿಜೆಪಿ ಸೋಲಿಗೆ ಕಾರಣರಾದ ಮಹಾದೇವಪ್ಪ ಯಾದವಾಡ ಅವರ ಮನೆಗೆ ಭೇಟಿ ನೀಡಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಶೆಟ್ಟರ್‌ ಎಲ್ಲರನ್ನೂ ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT