ಬೆಳಗಾವಿ: ನೀವು ಮುಖ್ಯಮಂತ್ರಿ ಆಗುವುದರೊಳಗೆ ಈ ಕೆಲಸಗಳನ್ನು ಮಾಡಿಕೊಡಿ.

ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅವರಿಗೆ ಬಿಜೆಪಿ ರಾಜ್ಯ ಘಟಕದ ವಕ್ತಾರರೂ ಆಗಿರುವ ವಕೀಲ ಎಂ.ಬಿ. ಝಿರಲಿ ಅವರು ಹೀಗೆ ಕೋರಿದ್ದು ಅಚ್ಚರಿ ಮೂಡಿಸಿತು.

ಶನಿವಾರ ಇಲ್ಲಿನ ವಕೀಲರ ಸಂಘಕ್ಕೆ ಭೇಟಿ ನೀಡಿ ಸಚಿವರಿಗೆ, ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಆಗ, ಸಭಿಕರ ಸಾಲಿನಲ್ಲಿ ಕುಳಿತಿದ್ದ ಝಿರಲಿ ಮೇಲಿನಂತೆ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಝಿರಲಿ, ‘ಉತ್ತರ ಕರ್ನಾಟಕದ ಗಟ್ಟಿ ಧ್ವನಿಯಾಗಿರುವ ಕತ್ತಿ ಅವರು, ಸಮಗ್ರ ಕರ್ನಾಟಕದ ಗಟ್ಟಿ ಧ್ವನಿಯಾಗಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕೂಗು ಮೊಳಗಿಸಬೇಕು. ವಕೀಲರಾದ ನಾವೂ ದನಿಗೂಡಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.