ಸೋಮವಾರ, ಸೆಪ್ಟೆಂಬರ್ 20, 2021
20 °C

ಬೆಳಗಾವಿ: ‘ಖಾತ್ರಿ’ ಕೆಲಸಕ್ಕೆ ಯಂತ್ರ ಬಳಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ (ಬೆಳಗಾವಿ ಜಿಲ್ಲೆ): ಸಮೀಪದ ಕನ್ನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸಕ್ಕೆ ಜೆಸಿಬಿ ಬಳಸಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸಸಿಗಳನ್ನು ನೆಡುವುದಕ್ಕಾಗಿ ಪಂಚಾಯ್ತಿಯಿಂದ ಗುಂಡಿಗಳನ್ನು ತೋಡಲಾಗುತ್ತಿದೆ. ಈ ಕೆಲಸಕ್ಕೆ ಮಾನವ ಸಂಪನ್ಮೂಲದ ಬದಲಿಗೆ ಯಂತ್ರ ಬಳಸಲಾಗುತ್ತಿದೆ. ಇದರಿಂದ ದುಡಿಯುವ ಕೈಗಳಿಗೆ ಕೆಲಸ ಸಿಗದಂತಾಗಿದೆ. ಅಕ್ರಮ ನಡೆದಿದೆ ಎಂದು ದೂರಲಾಗಿದೆ.

‘ಕೂಲಿ ಕಾರ್ಮಿಕರನ್ನು ಬಳಸಿ ಕೆಲಸ ಮಾಡಿಸುವಂತೆ ಗ್ರಾ.ಪಂ. ಸದಸ್ಯರಿಗೆ ಹೇಳಿದ್ದೆ. ಜೆಸಿಬಿ ಬಳಕೆ ಬಗ್ಗೆ ಗೊತ್ತಿಲ್ಲ. ವಿಚಾರಿಸುತ್ತೇನೆ’ ಎಂದು ಕನ್ನಾಳದ ಪಿಡಿಒ ಎಂ.ಎಸ್. ಚೌದರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.