ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ | ಗುರು ಮಡಿವಾಳೇಶ್ವರ ರಥೋತ್ಸವ ನಾಳೆ

ಬೈಲಹೊಂಗಲ ಮಠದಲ್ಲಿ ಮನೆ ಮಾಡಿದ ಸಂಭ್ರಮ, ಧಾರ್ಮಿಕ– ಸಾಂಸ್ಕತಿಕ ಕಲರವ
ರವಿಕುಮಾರ ಎಂ. ಹುಲಕುಂದ
Published 7 ಜನವರಿ 2024, 5:23 IST
Last Updated 7 ಜನವರಿ 2024, 5:23 IST
ಅಕ್ಷರ ಗಾತ್ರ

ಬೈಲಹೊಂಗಲ: ನಾಡಿನ ಮಹಾಮಹಿಮರಲ್ಲಿ ಗುರು ಮಡಿವಾಳ ಶಿವಯೋಗೇಶ್ವರರೂ ಒಬ್ಬರು. ಧಾರವಾಡ ಜಿಲ್ಲೆಯ ಗರಗದಲ್ಲಿ ನೆಲೆಸಿ ಆ ಕ್ಷೇತ್ರವನ್ನು ಪಾವನವಾಗಿಸಿದ್ದಾರೆ. ರಾಣಿ ಚನ್ನಮ್ಮನ ನಾಡು ಬೈಲಹೊಂಗಲದಲ್ಲಿ ಕೂಡ ಅವರ ಶಾಖಾ ಮಠವಿದ್ದು, ಇಲ್ಲಿ ಈಗ ಜಾತ್ರೆ ಸಡಗರ ಮನೆ ಮಾಡಿದೆ.

ಗುರು ಮಡಿವಾಳ ಶಿವಯೋಗಿಗಳ ಮಹಿಮೆಯ  ನೆನೆಸಿದಷ್ಟು ಮೈನವಿರೇಳಿಸುತ್ತದೆ. ಸಮಾಜ ಸುಧಾರಣೆಗೆ ಇಂಥ ಮಹಾತ್ಮರು ನೀಡಿದ ಕೊಡುಗೆ ಅಜರಾಮರ.

ತಮ್ಮ ಜೀವಿತಾವದಿಯಲ್ಲಿ ಲೋಕ ಕಲ್ಯಾಣಕ್ಕಾಗಿ ಸಂಚರಿಸುವ ಸಂದರ್ಭದಲ್ಲಿ ಐತಿಹಾಸಿಕ ನಾಡು ಬೈಲಹೊಂಗಲದಲ್ಲಿ ತಮ್ಮ ಪಾದಸ್ಪರ್ಶ ಮಾಡಿದ್ದರಿಂದ ಪಟ್ಟಣದಲ್ಲಿಯೂ ಪವಾಡ ಸೃಷ್ಟಿಯಾಗಿದೆ. ಅವರು ನೀಡಿದ ಆಧ್ಯಾತ್ಮಿಕ ಕ್ರಾಂತಿ ನಿತ್ಯ ಜನಮನದಲ್ಲಿ ಉಳಿಯಬೇಕೆಂಬ ಮಾರ್ಗವನ್ನು ಅನುಸರಿಸಿದ ಈ ಹಿಂದಿನ ಮಠದ ಲಿಂಗೈಕ್ಯ ಶಿವಶರಣೆ ತಂಗೆಮ್ಮ ತಾಯಿ ಅವರು ಸುಮಾರು 50 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ಭಾಗದಲ್ಲಿ ಧರ್ಮದ ತಿರುಳನ್ನು ತಿಳಿಸಿಕೊಟ್ಟಿದ್ದಾರೆ.

ತಂಗೆಮ್ಮ ತಾಯಿ ಕೊಡುಗೆ: ತಂಗೆಮ್ಮ ತಾಯಿ ಅವರು ಮಠದಲ್ಲಿ ಪ್ರವಚನ, ಧಾರ್ಮಿಕ ಕಾರ್ಯಗಳಿಂದ ಜನರನ್ನು ಅಧ್ಯಾತ್ಮದತ್ತ ಸೆಳೆದಿದ್ದರು. ಅವರ ಲಿಂಗೈಕ್ಯದ ನಂತರ ಇಂದಿನ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಮಡಿವಾಳೇಶ್ವರ ಸ್ವಾಮೀಜಿ 10 ವರ್ಷಗಳಿಂದ ಘಟದಿಂದ ಮಠ ಬೆಳಸದೆ ಮಠದಿಂದ ಘಟ ಬೆಳೆಸಿ ಹಲವು ವಿಧಾಯಕ ಕಾರ್ಯ ಮಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸ, ಬೆಂಗಳೂರಿನ ಸಂಸ್ಕೃತ ಅಧ್ಯಯನ ಪೀಠದಲ್ಲಿ ಸಂಸ್ಕೃತ ಪಾಂಡಿತ್ಯ ಪಡೆದಿದ್ದಾರೆ.

33ನೇ ಜಾತ್ರೆ: ಮಠದಲ್ಲಿ ಈಗಾಗಲೇ ಮಡಿವಾಳೇಶ್ವರ 33ನೇ ಜಾತ್ರಾ ಸಂಭ್ರಮ ಮನೆ ಮಾಡಿದೆ. ಮಡಿವಾಳೇಶ್ವರ ಗದ್ದುಗೆ ರುದ್ರಾಭಿಷೇಕ, ವಿಶೇಷ ಪೂಜೆ, ಪ್ರಾರ್ಥನೆ, ಸಹಸ್ರ ಮಂತ್ರ ಪಠಣ, ನೈವೇದ್ಯ, ಅನ್ನ ಪ್ರಸಾದ ನೆರವೇರಿಸಲಾಗುತ್ತಿದೆ. ಜಾತ್ರೆ ಅಂಗವಾಗಿ ಜ.8ರಂದು ಸಂಜೆ 4ಕ್ಕೆ ಜವಳಿ ಖೂಟದಿಂದ ಗಜಪಡೆಯೊಂದಿಗೆ ಮಹಾರಥೋತ್ಸವ ಜರುಗಲಿದ್ದು, ನಾಡಿನ ವಿವಿಧ ಮಠಾಧೀಶರು, ಸಹಸ್ರಾರು ಭಕ್ತರು ಸಾಕ್ಷಿಯಾಗಲ್ಲಿದ್ದಾರೆ.

ಮಡಿವಾಳೇಶ್ವರ ಗದ್ಗುಗೆ
ಮಡಿವಾಳೇಶ್ವರ ಗದ್ಗುಗೆ
ಮಡಿವಾಳೇಶ್ವರ ಸ್ವಾಮೀಜಿ
ಮಡಿವಾಳೇಶ್ವರ ಸ್ವಾಮೀಜಿ
ಗುರು ಮಡಿವಾಳೇಶ್ವರ ಮಠದಿಂದ ಸಾಮಾಜಿಕ ಧಾರ್ಮಿಕ ಸೇವೆ ಮಾಡಲಾಗುತ್ತಿದೆ. ನಮ್ಮ ಪರಂಪರೆ ಎತ್ತಿ ಹಿಡಿಯುವ ಯುವ ಶಕ್ತಿಯನ್ನು ರೂಪಿಸುವುದು ಉದ್ದೇಶ
ಮಡಿವಾಳೇಶ್ವರ ಸ್ವಾಮೀಜಿ ಪೀಠಾಧಿಪತಿ

₹2 ಕೋಟಿ ವೆಚ್ಚದಲ್ಲಿ ವಿಶಿಷ್ಟ ಮಠ ಪುರಸಭೆ ಆಡಳಿತ ಮಂಡಳಿ ಹಲವು ವರ್ಷಗಳ ಹಿಂದೆ 9 ಗುಂಟೆ ಜಾಗ ನೀಡಿದ್ದು ಆ ಸ್ಥಳದಲ್ಲಿ ಶಂಭೋಲಿಂಗ ದೇವಸ್ಥಾನ ನಿರ್ಮಾಣವಾಗಿದೆ. ಅರಬಾವಿ ಕಲ್ಲಿನಲ್ಲಿ ವಿಭಿನ್ನ ಆಕರ್ಷಕ ಚಿತ್ತಾರಗಳಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ನೂತನ ಮಠದ ಕಟ್ಟಡ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಇದಕ್ಕೆ ಭಕ್ತರ ಕಾಣಿಕೆ ದೊಡ್ಡದು. ಶಂಭೋಲಿಂಗ ಗಂಗಾಮಾತಾ ಈಶ್ವರ ನಾಗದೇವರ ವಿಗ್ರಹಗಳನ್ನು ನಿರ್ಮಿಸಲಾಗಿದೆ. ಮಠದಲ್ಲಿ ಮಡಿವಾಳೇಶ್ವರರ ಗದ್ದುಗೆ ಬಸವೇಶ್ವರ ಚನ್ನಬಸವೇಶ್ವರ ಮೂರ್ತಿ ಆಂಜನೆಯ ಅಕ್ಕಮಹಾದೇವಿ ತಂಗೆಮ್ಮ ತಾಯಿ ಮೂರ್ತಿಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT