ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟು ಕೇಳಿ ನೋಟು ಪಡೆಯುತ್ತಿರುವ ಎಂಇಎಸ್!

Last Updated 5 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಮತ್ತು ಶಿವಸೇನಾ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶುಭಂ ಸೆಳಕೆ ಅವರು ಮರಾಠಿ ಭಾಷಿಗರು ಹೆಚ್ಚಿರುವ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಮತ ಯಾಚನೆ ವೇಳೆ ಅವರು ಪ್ರಚೋದನಕಾರಿ ಭಾಷಣವನ್ನೂ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.ಮತ ಕೇಳಿ ನೋಟನ್ನೂ ಪಡೆದುಕೊಳ್ಳುತ್ತಿದ್ದಾರೆ. ಚುನಾವಣೆ ಖರ್ಚಿಗಾಗಿ ದೇಣಿಗೆ ನೀಡುವವರಿಗೆ ರಸೀದಿ ಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಮುಳೆಗೆ ಮರಾಠರ ಇನ್ನೊಂದು ಬಣ ಬೆಂಬಲ
ಬಸವಕಲ್ಯಾಣ (ಬೀದರ್‌ ಜಿಲ್ಲೆ): ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಎನ್‌ಸಿಪಿಯಿಂದಸ್ಪರ್ಧಿಸಿ ನಾಮಪತ್ರ ಹಿಂದಕ್ಕೆ ಪಡೆದು ಬಿಜೆಪಿ ಬೆಂಬಲಿಸಿರುವ ಮಾಜಿ ಶಾಸಕ ಮಾರುತಿರಾವ್ ಮುಳೆ ಅವರ ಭಾವಚಿತ್ರಕ್ಕೆ ಶಿವಾಜಿ ಪಾರ್ಕ್‌ನಲ್ಲಿ ಸೋಮವಾರ ಮರಾಠಾ ಸಮಾಜದ ಇನ್ನೊಂದು ಬಣದವರು ಕ್ಷೀರಾಭಿಷೇಕ ಮಾಡಿದರು.

‘ಮುಳೆ ಅವರು ಬಿಜೆಪಿ ಬೆಂಬಲಿಸಿದ್ದನ್ನು ವಿರೋಧಿಸಿ ಕೆಲವರು ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ್ದರು. ಹೀಗಾಗಿ ಕ್ಷೀರಾಭಿಷೇಕ ನಡೆಸಲಾಯಿತು’ ಎಂದು ಮರಾಠಾ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಟಿ.ಶಿಂಧೆ ತಿಳಿಸಿದರು.

ಮುಳೆ ಬೆಂಬಲಿಗರ ಸಭೆಯಲ್ಲಿ ಮುಖಂಡರಾದ ತಾತೇರಾವ್ ಪಾಟೀಲ, ಜ್ಞಾನೇಶ್ವರ ಮುಳೆ, ಸಂಭಾಜಿ ಜಗತಾಪ, ರಾಜೀವ್ ಭೋಸ್ಲೆ, ವಿಶ್ವನಾಥ ಪಾಟೀಲ ಲಾಡವಂತಿ, ಬಾಲು ಪಾಟೀಲ ಹೊನ್ನಳ್ಳಿ, ಬಾಳಾ ಅಷ್ಟೆ, ದೀಪಕ ನಾಗದೆ, ವಿನಯಕುಮಾರ ಮಾತನಾಡಿದರು.

ಕಳವು ಪ್ರಕರಣ: ಚುನಾವಣಾಧಿಕಾರಿ ಅಮಾನತು
ಬರಪೇಟಾ (ಅಸ್ಸಾಂ) (ಪಿಟಿಐ): ಕಚೇರಿಯಲ್ಲಿ ₹55 ಲಕ್ಷ ನಗದು ಕಳವಾದ ಪ್ರಕರಣದಲ್ಲಿ ಬರಪೇಟಾ ಚುನಾವಣಾ ಅಧಿಕಾರಿ ಶಶಿಕುಮಾರ್ ದೇಕಾ ಅವರನ್ನು ಅಮಾನತು ಮಾಡಲಾಗಿದೆ.

ಚುನಾವಣಾ ಕಚೇರಿಯಿಂದ ಹಣ ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಭಾನುವಾರ ಬಂಧಿಸಲಾಗಿತ್ತು. ಕಂಪ್ಯೂಟರ್ ಆಪರೇಟರ್ ಅಲಕೇಶ್ ದೇಕಾ ಮತ್ತು ಕಿರಿಯ ಸಹಾಯಕ ಪ್ರಾಂಜಲ್ ಕಾಕತಿ ಅವರು ಬಂಧನಕ್ಕೊಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT