ಬುಧವಾರ, ಅಕ್ಟೋಬರ್ 20, 2021
22 °C

ಬೆಳಗಾವಿ: ಬಡಾಲ ಅಂಕಲಗಿಯಲ್ಲಿ ಗೋಡೆ ಕುಸಿದು 7 ಸಾವು, ಸಾಮೂಹಿಕ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮೃತಪಟ್ಟ ಒಂದೇ ಕುಟುಂಬದ ಆರು ಮಂದಿಯ ಸಾಮೂಹಿಕ ಅಂತ್ಯಕ್ರಿಯೆಯನ್ನು ಬುಧವಾರ ತಡರಾತ್ರಿ ಜಿಲ್ಲಾಡಳಿತದಿಂದ ನೆರವೇರಿಸಲಾಯಿತು.

ಗ್ರಾಮದ ರುದ್ರಭೂಮಿಯಲ್ಲಿ ಒಂದೇ ಕುಟುಂಬದ ಆರು ಜನರ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮತ್ತೊಬ್ಬ ಬಾಲಕಿ ಅಂತ್ಯಕ್ರಿಯೆ ಪ್ರತ್ಯೇಕವಾಗಿ ಮಾಡಲಾಯಿತು. ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಘಟನೆಯಲ್ಲಿ ಅರ್ಜುನ ಖನಗಾಂವಿ (45), ಪತ್ನಿ ಸತ್ಯವ್ವ ಅರ್ಜುನ್ ಖನಗಾಂವಿ (45), ಪುತ್ರಿ ಪೂಜಾ ಅರ್ಜುನ್ ಖನಗಾಂವಿ (8) ಮತ್ತು ಸವಿತಾ ಭೀಮಪ್ಪ ಖನಗಾಂವಿ (30), ಲಕ್ಷ್ಮಿ ಭೀಮಪ್ಪ ಖನಗಾಂವಿ (15), ಶಾಂತವ್ವ ಭೀಮಪ್ಪ ಖನಗಾಂವಿ ಹಾಗೂ ಕಾಶವ್ವ ವಿಠ್ಠಲ ಕೊಳೆಪ್ಪನವರ (8) ಮೃತರಾಗಿದ್ದಾರೆ. ಕುಟುಂಬದವರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

ಖನಗಾಂವಿ ಕುಟುಂಬದವರು ವಾಸವಿದ್ದ ತಗಡಿನ ಶೆಡ್​​ನಲ್ಲೇ ಐವರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.  ಅರ್ಜುನ್ ಮತ್ತು ಲಕ್ಷ್ಮಿ ಮರಣೋತ್ತರ ಪರೀಕ್ಷೆಯನ್ನು ಹಿರೇಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ
ನಡೆಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು