ಬೈಲಹೊಂಗಲ: ‘ಮೌಲಾನಾ ಅಬುಲ್ ಕಲಾಂ ಆಝಾದ್ ಹೈಸ್ಕೂಲ್ ಉಳಿಸಿ, ಬೆಳೆಸುವಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಅತ್ಯುತ್ತಮ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ’ ಎಂದು ಕರ್ನಾಟಕ ಉರ್ದು ಅಕಾಡೆಮಿ ನಿರ್ದೇಶಕ ಶರೀಫ್ ಮೊಕಾಶಿ ಹೇಳಿದರು.

ಪಟ್ಟಣದ ಈದ್ಗಾ ಮೈದಾನದಲ್ಲಿರುವ ಮೌಲಾನಾ ಅಬುಲ್ ಕಲಾಂ ಆಝಾದ್ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ವಾರ್ಷಿಕ ಸಭೆ ಹಾಗೂ ಮುಸ್ಲಿಂ ಸಮಾಜದ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಿತಿಯವರ ವೈಯಕ್ತಿಕ ಹಿತಾಸಕ್ತಿಯಿಂದ ಶಾಲೆಯ ಅಭಿವೃದ್ಧಿ ಕುಂಠಿತವಾಗಿದೆ. ಹಳೆಯ ವಿದ್ಯಾರ್ಥಿಗಳ ಸಂಘ ತನು, ಮನ, ಧನದಿಂದ ಶಾಲೆಯ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸುವ ಅಗತ್ಯ ಇದೆ. ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಎರಡು ಸಮಿತಿಯವರು ಹಿಂಪಡೆಯಬೇಕು. ಶಿಕ್ಷಕರಿಲ್ಲದೆ ಮಕ್ಕಳಿಗೆ ತೊಂದರೆ ಉಂಟಾಗುತ್ತಿದ್ದು, ಶೀಘ್ರ ಶಿಕ್ಷಕರ ನೇಮಕ, ಪಿಯುಸಿ ಪ್ರಾರಂಭಿಸಲು ಅನುಮತಿ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ನಡೆಯಬೇಕಿದೆ. ಇದಕ್ಕೆ ತಡೆ ಒಡ್ಡುತ್ತಿರುವ ಕಮಿಟಿಗಳು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಾಜೀದ ಬಾಬಣ್ಣವರ, ನಿರ್ದೇಶಕ ರಫೀಕ ದೇಶನೂರ, ನಜೀರ ತೊಲಗಿ ಮಾತನಾಡಿ, ‘ಹಳೆಯ ವಿದ್ಯಾರ್ಥಿಗಳ ಸಂಘ ಯಾವುದೇ ಕಮಿಟಿ ಮಾಡುವುದಿಲ್ಲ. ನಮ್ಮ ಮುಖ್ಯ ಉದ್ದೇಶ ಶಾಲೆಯ ಅಭಿವೃದ್ಧಿ. ಈ ದಿಸೆಯಲ್ಲಿ ಎಲ್ಲ ಹಳೆಯ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದರು.

ಸಮಾಜ ಮುಖಂಡರು ಮಾತನಾಡಿ, ಕಮಿಟಿಯ 11 ಜನ ಸದಸ್ಯರಲ್ಲಿ ಅಧ್ಯಕ್ಷ, ಇಬ್ಬರು ಸದಸ್ಯರು ಮಾತ್ರ ರಾಜೀನಾಮೆ ನೀಡಿದ್ದು, ಅಂಜುಮನ್ ಎ-ಇಸ್ಲಾಂ ಸೂಕ್ತ ನಿರ್ಧಾರ ಮಾಡುವವರೆಗೂ ಶಾಂತತೆಯಿಂದ ಇರಬೇಕು ಎಂದರು.

ಕಮಿಟಿ ಹಿರಿಯ ಸದಸ್ಯರಾದ ಅಬ್ದುಲರೆಹಮಾನ ನಂದಗಡ, ಬಾಬಾಸಾಬ ಸುತಗಟ್ಟಿ, ಹಾರೂನ್ ಕಿತ್ತೂರ, ಸಮೀವುಲ್ಲಾ ನೇಸರಗಿ, ನಜೀರ ಕಿತ್ತೂರ ಸಭೆಯಲ್ಲಿ ರಾಜೀನಾಮೆ ನೀಡಿದರು.

ಅಂಜುಮನ್ –ಎ- ಇಸ್ಲಾಂ ಕಮಿಟಿ ಅಧ್ಯಕ್ಷ ಡಾ.ಐಜಾಜ ಬಾಗೇವಾಡಿ, ಇಮ್ತಿಯಾಜ ನೇಸರಗಿ, ಮದರಸಾದ ಮುಖ್ಯಸ್ಥ ಶೌಕತಲಿ ಬಾದಿ, ಪುರಸಭೆ ಉಪಾಧ್ಯಕ್ಷ ಬುಡ್ಡೆಸಾಬ ಶಿರಸಂಗಿ, ಶಬ್ಬೀರ ಕುದರಿ, ಅಣ್ಣಾಸಾಹೇಬ ಮಾನೂರಶೇಖ, ಜಮೀಲಹ್ಮದ ಸಂಗೊಳ್ಳಿ, ಇಮಾಮಸಾಬ ನದಾಫ, ಮೌಲಾನಾ ಅಕೀಲ್, ಬುಡ್ಡೆಸಾಬ ದಾಸ್ತಿಕೊಪ್ಪ, ಮಹ್ಮದಷಾ ನದಾಫ, ರಿಯಾಜಹ್ಮದ ಮಿರ್ಜನ್ನವರ ಸೇರಿದಂತೆ ನೂರಾರು ಮುಸ್ಲಿಂ ಸಮಾಜದ ಬಾಂಧವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.