ಗುರುವಾರ , ಅಕ್ಟೋಬರ್ 22, 2020
23 °C

ಹೃದಯದಲ್ಲಿ ಸ್ಥಳ ಗಳಿಸುವುದು ದೊಡ್ಡ ಆಸ್ತಿ: ಆತ್ಮಾರಾಮ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ: ‘ನಮ್ಮ ಸುತ್ತಮುತ್ತಲಿನವರ ಹೃದಯದಲ್ಲಿ ನಮಗೆ ಸ್ಥಳವಿದೆ ಎಂದಾದರೆ ಅದಕ್ಕಿಂತ ದೊಡ್ಡ ಆಸ್ತಿ ಇನ್ನಾವುದೂ ಇಲ್ಲ’ ಎಂದು ಕಕಮರಿಯ ಆತ್ಮಾರಾಮ ಸ್ವಾಮೀಜಿ ಹೇಳಿದರು.

ಇಲ್ಲಿನ ಸಿದ್ದರಾಮೇಶ್ವರ ಮಠದ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಕಷ್ಟಕ್ಕೆ ಆಗದ ಮಕ್ಕಳು, ಬಡತನ ಹಂಚಿಕೊಳ್ಳದ ಪ್ರೀತಿ, ತಮಾಷೆ ಸಹಿಸದ ಸ್ನೇಹ, ಬೆಳವಣಿಗೆ ಸಹಿಸದ ಬಂಧುಗಳನ್ನು ನಂಬಿ ಜೀವನ ನಡೆಸಲು ಸಾಧ್ಯವಿಲ್ಲ’ ಎಂದರು.

ಹೊನವಾಡದ ಬಾಬುರಾವ ಮಹಾರಾಜರು ಮತ್ತು ಕುಂಬಾರ ಪೀಠದ ಬಸವಗುಂಡಯ್ಯ ಸ್ವಾಮೀಜಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಮುಖಂಡರಾದ ಅರವಿಂದ ಉಂಡೋಡಿ, ಗುರುರಾಜ ಕುಂಬಾರ, ದಾನಪ್ಪ ಹತ್ತಿ, ಮಲ್ಲಿಕಾರ್ಜುನ ಹತ್ತಿ, ಐ.ಜಿ. ಉಂಡೋಡಿ, ಸಿದ್ದು ಕೋಡ್ನಿ, ಶಿವು ಹತ್ತಿ, ಸುರೇಶ ಸನಗೊಂಡ, ಅಶೋಕ ಪರುಶೆಟ್ಟಿ, ಅಮೋಘ ಖೊಬ್ರಿ, ಅಮೋಘಸಿದ್ದ ಟೋಪಣಗೋಳ, ಮಹಾದೇವ ಸಕ್ರಿ, ರಾಜು ಕಾರಂಡೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು