ಬೆಳಗಾವಿ: ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಬೆಳಗಾವಿ: ರಾಜ್ಯ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರ ಒಕ್ಕೂಟದ ಸದಸ್ಯತ್ವ ಅಭಿಯಾನಕ್ಕೆ ಶಾಸಕ ಸತೀಶ ಜಾರಕಿಹೊಳಿ ಗೋಕಾಕದಲ್ಲಿ ಶುಕ್ರವಾರ ಚಾಲನೆ ನೀಡಿದರು.
ನಂತರ ಮಾತನಾಡಿ, ‘ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವುದು ಉತ್ತಮ ಕ್ರಮವಾಗಿದೆ. ಕಲಾವಿದರು ದಶಕಗಳಿಂದ ತಮ್ಮ ಕಲೆಯಿಂದ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಸರ್ಕಾರವು ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ನಿಷೇಧಿಸುವ ಮೂಲಕ ಈ ಕಲಾವಿದರಿಗೆ ಅನುಕೂಲ ಮಾಡಿಕೊಟ್ಟಿದೆ’ ಎಂದರು.
‘ಮಣ್ಣಿನ ಮೂರ್ತಿ ತಯಾರಕರಿಗೂ ಗುರುತಿನ ಚೀಟಿ, ವೃದ್ಧಾಪ್ಯ ವೇತನದಂತಹ ಸೌಲಭ್ಯಗಳು ಸಿಗುವಂತಾಗಬೇಕು’ ಎಂದು ಆಶಿಸಿದರು.
ಸಂಘದ ರಾಜ್ಯ ಘಟಕದ ಮೋಹನ ಚವಾಣ, ಕಾರ್ಯದರ್ಶಿ ಮುತ್ತಣ್ಣ ಭರಡಿ, ಮಲ್ಲಿಕಾರ್ಜುನ ಅನಿಗೋಳ, ಶಂಕರ ಕಮ್ಮಾರ, ಬೀಮಪ್ಪ ಕಮ್ಮಾರ, ಕೊಣ್ಣೂರಿನ ಕಲಾವಿದರಾದ ಶಂಕರ ಕುಂಬಾರ, ಬಸವರಾಜ ಕುಂಬಾರ, ಗೋಪಾಲ ಕುಂಬಾರ, ಚನ್ನಬಸವ ತೀರಕಣ್ಣವರ, ಯಮನಪ್ಪ ಕುಂಬಾರ, ಸುರೇಶ ಕುಂಬಾರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.