ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾಶಂಕರ ವಿರುದ್ಧ ಕ್ರಮಕ್ಕೆ ಎಂಇಎಸ್‌ ಆಗ್ರಹ

Last Updated 2 ಜನವರಿ 2020, 14:25 IST
ಅಕ್ಷರ ಗಾತ್ರ

ಬೆಳಗಾವಿ:ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಸದಸ್ಯರ ವಿರುದ್ಧ ಗಂಭೀರ ಆರೋಪ ಮಾಡಿರುವ ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂಘಟನೆಯ ಕಾರ್ಯಕರ್ತರು ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಿದರು.

‘ರಕ್ಕಸಕೊಪ್ಪ ಜಲಾಶಯದಲ್ಲಿ ವಿಷ ಬೆರೆಸಿ ಕನ್ನಡಿಗರನ್ನು ಕೊಲೆ ಮಾಡಲು ಎಂಇಎಸ್‌ ಕಾರ್ಯಕರ್ತರು ಯತ್ನಿಸಿದ್ದರು ಎಂದು ಭೀಮಾಶಂಕರ ಪಾಟೀಲ ಯಾವುದೇ ಆಧಾರವಿಲ್ಲದೇ ಆರೋಪಿಸಿದ್ದಾರೆ. ಈ ರೀತಿ ಹೇಳುವ ಮೂಲಕ ಗಡಿಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ ಠಾಕ್ರೆ ಹೇಳಿಕೆ ನೀಡಿರುವುದು ರಾಜಕೀಯ ಉದ್ದೇಶದ ಹೇಳಿಕೆ. ಅದಕ್ಕೂ ಸಮಿತಿಗೂ ಯಾವುದೇ ಸಂಬಂಧವಿಲ್ಲ’ ಎಂದು ಅಧ್ಯಕ್ಷ ದೀಪಕ ದಳವಿ ಹೇಳಿದರು.

’ಮಹಾರಾಷ್ಟ್ರ– ಕರ್ನಾಟಕ ಗಡಿ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ಅದಕ್ಕಾಗಿ ಎಂಇಎಸ್‌ನವರುಯಾವುದೇ ರೀತಿ ಹೇಳಿಕೆ ನೀಡುತ್ತಿಲ್ಲ. ಆದರೆಕನ್ನಡ ಪರ ಹೋರಾಟಗಾರರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಯಿಂದ ಅಕ್ಕ– ಪಕ್ಕದ ರಾಜ್ಯಗಳಲ್ಲಿ ಶಾಂತಿ ಕದಡುತ್ತಿದೆ’ ಎಂದು ಆರೋಪಿಸಿದರು.

ಮಾತಿನ ಚಕಮಕಿ: ಕನ್ನಡ ಮಾಧ್ಯಮದವರು ಕೇಳುವ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ಹೇಳಿದ್ದರಿಂದ ಕೆಲಕಾಲ ಪತ್ರಕರ್ತರು ಹಾಗೂ ದೀಪಕ ದಳವಿ ನಡುವೆ ಮಾತಿನ ಚಕಮಕಿ ನಡೆಯಿತು.

ಮುಖಂಡರಾದ ಮನೋಹರ ಕಿಣೇಕರ, ಅರವಿಂದಪಾಟೀಲ,ಮಾಳೋಜಿ ಅಸ್ಟೇಕರ, ಪ್ರಕಾಶ ಶಿರೋಳಕರ, ಬಂಡು ಕೇರವಾಡಕರ, ಸರಸ್ವತಿ ಪಾಟೀಲ, ರಾಜು ಮೊರವೆ, ರಂಜೀತ ಪಾಟೀಲ ಇತರರು ಇದ್ದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಪೊಲೀಸ್‌ ಆಯುಕ್ತ ಕಚೇರಿಗೆ ತೆರಳಿ ಡಿಸಿಪಿ ಸೀಮಾ ಲಾಟ್ಕರ್‌ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT