ಸೋಮವಾರ, ಸೆಪ್ಟೆಂಬರ್ 27, 2021
23 °C
ಕಳೆದ ಬಾರಿಯ ನೆರೆ ಪರುಹಾರವೇ ಬಂದಿಲ್ಲವೆಂದು ಆಕ್ರೋಶ

ರಾಮದುರ್ಗ: ಶಾಸಕ ಯಾದವಾಡರಿಗೆ ತೀವ್ರ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮದುರ್ಗ: ಪ್ರವಾಹದಿಂದ ರಕ್ಷಣೆ ಪಡೆಯಲು ಎತ್ತರದ ಸ್ಥಳಗಳಿಗೆ ಹೋಗುವಂತೆ ಜಾಗೃತಿ ಮೂಡಿಸಲು ತೆರಳಿದ್ದ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಕಿಲಬನೂರಿನ ಜನ ಶನಿವಾರ ತೀವ್ರ ತರಾಟೆಗೆ ತೆಗೆದುಕೊಂಡರು.

ನವೀಲು ತೀರ್ಥ ಅಣೆಕಟ್ಟೆಯಿಂದ ಬಿಡುಗಡೆಯಾದ ನೀರಿನಿಂದ ಜಲಾವೃತಗೊಂಡ ಮನೆ, ಜಮೀನು ವೀಕ್ಷಣೆಗೆ ಹೋದಾಗ ಮಹಿಳೆಯರ ತಂಡವೊಂದು ಕಳೆದ ಬಾರಿಯ ನೆರೆ ಪರಿಹಾರ ತಲುಪಿಲ್ಲ ಎಂದು ದೂರಿದರು.

ದಿನಾಲೂ ದುಡಿದು ಬದುಕುವ ನಮಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

‘ಕಳೆದ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ₹ 5 ಲಕ್ಷ ಮಂಜೂರಾಗಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಕೆಲ ಮನೆಗಳ ಸಮೀಕ್ಷೆ ನಡೆಸಿ ಜಿಪಿಎಸ್‌ ಸಹ ಮಾಡಿಸಲಾಗಿದೆ. 6–7 ಎಕರೆ ಜಮೀನು ಸಿಕ್ಕರೆ ಕಿಲಬನೂರು ಪ್ರದೇಶವನ್ನು ಸ್ಥಳಾಂತರಿಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.