ಶುಕ್ರವಾರ, ಮಾರ್ಚ್ 5, 2021
30 °C

ರೈತರೊಂದಿಗೆ ಬಸ್‌ನಲ್ಲಿ ತೆರಳಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕಾಂಗ್ರೆಸ್ ಪಕ್ಷದಿಂದ ಜ.20ರಂದು ಹಮ್ಮಿಕೊಂಡಿರುವ ರಾಜಭವನ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನೇತೃತ್ವದಲ್ಲಿ ನೂರಾರು ರೈತರು ವಿಶೇಷ ಬಸ್‌ನಲ್ಲಿ ಮಂಗಳವಾರ ಪ್ರಯಾಣ ಬೆಳೆಸಿದರು.

ಶಾಸಕರ ಕಚೇರಿಯಿಂದ ಬಸ್‌ನಲ್ಲಿ ತೆರಳಿದ ರೈತರೊಂದಿಗೆ ಶಾಸಕರೂ ತೆರಳಿದರು.

‘ಭಾರತ ರೈತರ ದೇಶ. ರೈತರ ಮೇಲೆಯೇ ಅವಲಂಬಿಸಿರುವ ದೇಶ. ರೈತರನ್ನು ಕಡೆಗಣಿಸಿದರೆ ಉಳಿಗಾಲವಿಲ್ಲ. ಹೀಗಾಗಿ, ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ. ನಮ್ಮ ಪಕ್ಷ ಸದಾ ರೈತರ ಪರವಾಗಿಯೇ ನಿಲ್ಲುತ್ತದೆ. ಅವರಿಗಾಗಿ ಹೋರಾಡುತ್ತದೆ’ ಎಂದು ಲಕ್ಷ್ಮಿ ಹೇಳಿದರು.

₹ 3.32 ಕೋಟಿ ವೆಚ್ಚದಲ್ಲಿ 2 ಕೆರೆ ಅಭಿವೃದ್ಧಿ:

₹ 3.32 ಕೋಟಿ ವೆಚ್ಚದಲ್ಲಿ ಗ್ರಾಮೀಣ ಕ್ಷೇತ್ರದ ಎರಡು ಕೆರೆಗಳ ಅಭಿವೃದ್ಧಿ ಮತ್ತು ಸೌಂದರ್ಯೀಕರಣ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಂಗಳವಾರ ಪೂಜೆ ನೆರವೇರಿಸಿದರು.

ಕ್ಷೇತ್ರದ ಕಂಗ್ರಾಳಿ ಬಿ‌.ಕೆ. ಗ್ರಾಮದ ಶಾಹೂನಗರದ ಸಮೀಪದಲ್ಲಿರುವ ಕೆರೆ ಅಭಿವೃದ್ಧಿ ಹಾಗೂ ಸೌಂದರ್ಯೀಕರಣ ಕಾಮಗಾರಿಗಳಿಗೆ ₹1.10 ಕೋಟಿ ಮಂಜೂರಾಗಿದೆ. ಕಾಮಗಾರಿಗೆ ಮಂಗಳವಾರ ಬೆಳಗ್ಗೆ ಚಾಲನೆ ನೀಡಲಾಯಿತು.

ಈ‌ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಹಿರಿಯರು, ದತ್ತಾ ಪಾಟೀಲ, ಜಯರಾಮ ಪಾಟೀಲ, ಸೈಯದ್ ಬಂಡೆಣ್ಣವರ, ಅಯುಬ್ ಪಠಾಣ್, ಅಡಿವೆಪ್ಪ, ಅಭಿಜಿತ್ ಪುಟಾಣಿ, ಅನಿಲ ಪಾವಸೆ, ಇನಾಮದಾರ್, ರಮ್ಜಾನ್ ಮನಿಯಾರ್ ಇದ್ದರು.

ಕಂಗ್ರಾಳಿ ಬಿ‌.ಕೆ. ಗ್ರಾಮದ ಕೆರೆ ಅಭಿವೃದ್ಧಿಗೆ ₹ 2.22 ಕೋಟಿ ಮಂಜೂರಾಗಿದೆ. ಕಾಮಗಾರಿಗೆ ಚಾಲನೆ ನೀಡುವ ವೇಳೆ ಮುಖಂಡರಾದ ಬಂದೆನವಾಜ್  ಸೈಯಜ್, ಕೌಸರ್ ಸೈಯದ್, ಶಮೀಮ್ ಪಠಾಣ, ಅಯೂಬ್‌ಖಾನ್ ಪಠಾಣ್, ಆನಂದ ಕಮ್ಮಾರ, ಸಿದ್ದರಾಯಿ ಬೆಳಗಾವಿ, ಜಯರಾಮ ಪಾಟೀಲ, ಅನಿಲ  ಪಾವಸೆ, ರಮ್ಜಾನ್, ರಫಿಕ್ ಗಾಡಿವಾಲೆ, ಷರೀಫ್, ಸಂದಿಸಾಬ್, ಜಮೀಲ್ ಕೊತವಾಲ್ ಹಾಗೂ ಕಾರ್ಯಕರ್ತರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು