ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮತ ಎಣಿಕೆ ಟೇಬಲ್ ಮುಂದೆ ಅಭ್ಯರ್ಥಿಗಳ ಠಿಕಾಣಿ

Last Updated 15 ಜೂನ್ 2022, 6:48 IST
ಅಕ್ಷರ ಗಾತ್ರ

ಬೆಳಗಾವಿ: ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ 23 ಅಭ್ಯರ್ಥಿಗಳ ಪೈಕಿ 22 ಮಂದಿ ಇಲ್ಲಿನ ಜ್ಯೋತಿ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಕೇಂದ್ರಕ್ಕೆ ಬಂದರು. ಕಾಂಗ್ರೆಸ್‍ನ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮಾತ್ರ ಬೆಳಿಗ್ಗೆ 11ರವರೆಗೂ ಇತ್ತ ಸುಳಿಯಲಿಲ್ಲ.

ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ, ಪದವೀಧರ ಅಭ್ಯರ್ಥಿ ಹಣಮಂತ ನಿರಾಣಿ ಬೆಳಿಗ್ಗೆ 8ರ ಸುಮಾರಿಗೇ ಒಳಗೆ ಬಂದರು. ನಂತರ ಕಾಂಗ್ರೆಸ್‍ನ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ, ಶಿಕ್ಷಕರ ಕ್ಷೇತ್ರದ ಜೆಡಿಎಸ್‍ನ ಚಂದ್ರಶೇಖರ ಲೋಣಿ ಬಂದರು.

ಯಾರು ಯಾರು ಬಂದಿದ್ದಾರೆ: ವಾಯವ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗಳಾದ ಎನ್‌.ಬಿ.ಬನ್ನೂರ, ಶ್ರೀನಿವಾಸಗೌಡ ಗೌಡರ, ಅಪ್ಪಾಸಾಹೇಬ ಕುರಣೆ, ಚಂದ್ರಶೇಖರ ಗುಡಸಿ, ಬಸಪ್ಪ ಮಣಿಗಾರ, ಶ್ರೀಕಾಂತ ಪಾಟೀಲ, ಶ್ರೇಣಿಕ್‌ ಜಾಂಗಟೆ, ಸಂಗಮೇಶ ಚಿಕ್ಕನರಗುಂದ, ಜಯಪಾಲ ದೇಸಾಯಿ, ಪದವೀಧರ ಕ್ಷೇತ್ರದಲ್ಲಿ ಸರ್ವಜನತಾ ಪಕ್ಷದಿಂದ ಜಿ.ಸಿ.ಪಟೇಲ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಯಲ್ಲಪ್ಪ ಕಲಕುಟ್ರಿ, ಪಕ್ಷೇತರರಾಗಿ ಆದರ್ಶಕುಮಾರ ಪೂಜಾರಿ, ಘಟಿಗೆಪ್ಪ ಮಗದುಮ್ಮ, ದೀಪಿಕಾ ಎಸ್‌., ನಿಂಗಪ್ಪ ಭಜಂತ್ರಿ, ಭೀಮಸೇನ ಬಾಗಿ, ರಾಜನಗೌಡ ಪಾಟೀಲ, ಸುಭಾಷ ಕೋಟೆಕಲ್‌ ತಮ್ಮ ಏಜೆಂಟರೊಂದಿಗೆ ಮತ ಎಣಿಕೆ ಟೇಬಲ್ ಮುಂದೆ ಠಿಕಾಣೆ ಹೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT