ಹುಣಶಿಕಟ್ಟಿ: ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಹುಣಶಿಕಟ್ಟಿಯಲ್ಲಿ ಶನಿವಾರ ಮೊಹರಂ ಹಬ್ಬವನ್ನು ಶಾಂತಿ–ಸೌಹಾರ್ದದಿಂದ ಆಚರಿಸಲಾಯಿತು.
ಬೆಳಗ್ಗೆಯಿಂದಲೇ ದರ್ಗಾದಿಂದ ಅಲಾಯಿ ಹಾಗೂ ಪಂಜಾಗಳನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು. ಮುಸ್ಲಿಂ ಧರ್ಮಗುರುಗಳು ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು.
ಮುಸ್ಲಿಂ ಹಾಗೂ ಹಿಂದೂ ಧರ್ಮೀಯರು ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮಹಿಳೆಯರು ದೇವರಿಗೆ ವಿವಿಧ ಖಾದ್ಯಗಳನ್ನು ಮಾಡಿ ನೈವೇದ್ಯ ನೀಡಿದರು. ಯುವಜನರು ಗ್ರಾಮದ ಪ್ರಮುಖ ಬೀದಿಗಳನ್ನು ಮೆರವಣಿಗೆ ಮಾಡಿದರು.