ಮೂಡಲಗಿ: ತಾಲ್ಲೂಕಿನ ಖಾನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯುಥ ಫಾರ ಸೇವಾ ಸಂಸ್ಥೆಯಿಂದ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಿದರು.
ಯುಥ ಫಾರ ಸೇವಾ ಸಂಸ್ಥೆ ಸದಸ್ಯ ಡಾ. ಶಿವಲಿಂಗ ಅರಗಿ ಮಾತನಾಡಿ, ಉತ್ತಮ ಸಮಾಜಕ್ಕಾಗಿ ಯಾವ ಮಗುವು ಶಿಕ್ಷಣದಿಂದ ವಂಚಿತರಾಗಬಾರದು. ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ಕಲಿಕಾ ಸಾಮಗ್ರಿಗಳ ದೇಣಿಗೆ ನೀಡಿದ ಸೂರತಪ್ಪ ಸಕ್ರೆಪ್ಪಗೋಳ, ಶಿವಲಿಂಗ ದಾನನ್ನವರ, ಶಿವಬೋಧ ಕೌಜಲಗಿ ಅವರನ್ನು ಸಮಾರಂಭದಲ್ಲಿ ಅಭಿನಂದಿಸಿದರು. ಯುಥ ಪಾರ ಸೇವಾ ಸಂಸ್ಥೆ ಸದಸ್ಯೆ ಗೀತಾ ಕರಗಣ್ಣಿ, ಅಲ್ಲಪ್ಪ ತುಪ್ಪದ, ಮಹಾಂತೇಶ ರಡ್ಡೇರಟ್ಟಿ, ಸದಾಶಿವ ಸುಣಧೋಳಿ, ಮುಖ್ಯ ಶಿಕ್ಷಕ ಚಂದ್ರಕಾಂತ ಕೊಡತೆ ಇದ್ದರು.