ಬುಧವಾರ, ಏಪ್ರಿಲ್ 14, 2021
23 °C

ಸಂಗೀತದಿಂದ ಶಿವನೊಲುಮೆ ಸಾಧ್ಯ: ವಿದುಷಿ ಡಾ.ರೋಹಿಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸಂಗೀತದ ಮೂಲಕ ಪರಶಿವನೊಲುಮೆ ಸುಲಭ ಸಾಧ್ಯ’ ಎಂದು ಭಾರತೀಯ ಗಾಯನ ಸಮಾಜದ ಅಧ್ಯಕ್ಷೆ, ವಿದುಷಿ ಡಾ.ರೋಹಿಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಶಿವಬಸವ ನಗರದ ಭಾರತೀಯ ಗಾಯನ ಸಮಾಜದ ಸಭಾಂಗಣದಲ್ಲಿ ತಮ್ಮ ಶಿಷ್ಯ ವೃಂದವು ಈಚೆಗೆ ಮಹಾಶಿವರಾತ್ರಿ ನಿಮಿತ್ತ ಸಾದರಪಡಿಸಿದ ‘ಶಿವತತ್ವ ಪ್ರಸ್ತುತಿ’ (ನಾದಮಂತ್ರ ಶಿವೋಪಾಸನೆ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಭಾರತೀಯರಿಗೆ ಶಿವನೇ ಪರಮೋಚ್ಛ ದೈವ. ಎಲ್ಲ ದೇವರುಗಳೂ ಈಶ್ವರನ ಸಗುಣಶಕ್ತಿಗಳಾಗಿವೆ. ಚೈತನ್ಯಾತ್ಮಕನಾದ ಪರಶಿವನ ಸಾತ್ವಿಕ ಗುಣ ಭಾರತೀಯರಲ್ಲಿದೆ. ಓಂಕಾರ ನಾದವು ಇಂದಿನ ಪ್ರಕ್ಷಬ್ದ ವಾತಾವರಣದಲ್ಲಿ ಮನುಷ್ಯರಲ್ಲಿ ಚೈತನ್ಯ ತುಂಬುತ್ತದೆ. ಈ ನಿಟ್ಟಿನಲ್ಲಿ ಇಂದಿನ ಮಕ್ಕಳಿಗೆ ಭಕ್ತಿ ಸಂಗೀತದ ಸಂಸ್ಕಾರ ನೀಡುವ ಅಗತ್ಯವಿದೆ’ ಎಂದರು.

ಮೂರು ವರ್ಷದ ಗಾಯಕಿ ಶ್ರೇಷ್ಠಾ ಕುರೇರ ಉದ್ಘಾಟಿಸಿದರು. ದಾಕ್ಷಾಯಿಣಿ ಹೂಗಾರ ಹಾಗೂ ಸಾವಿತ್ರಿ ಜಡಿಮಠ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು. 36 ಮಂದಿ ಕಾರ್ಯಕ್ರಮ ನಡೆಸಿಕೊಟ್ಟರು. ಉಪನಿಷತ್ತು, ಭಾರತೀಯ ಭಾಷೆಗಳ ಶಿವ ಭಜನೆಗಳು ಹಾಗೂ ವಚನಗಳನ್ನು ಪ್ರಸ್ತುತಪಡಿಸಿದರು.

ಸತೀಶ ಗಚ್ಚಿ ತಬಲಾ ಸಾಥ್‌ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು