ಸೋಮವಾರ, ಮಾರ್ಚ್ 20, 2023
30 °C

ಸಂಗೀತ ಆಲಿಸುವುದರಿಂದ ಆರೋಗ್ಯ ವೃದ್ಧಿ: ರವಿ ಕೋಟಾರಗಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಗರಗೋಳ (ಸವದತ್ತಿ ತಾ.): ‘ಸಂಗೀತ ಆಲಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಒತ್ತಡದಿಂದ ಹೊರಬರಲು ನಿತ್ಯವೂ ಕೆಲ ಸಮಯವನ್ನು ಸಂಗೀತಕ್ಕೆ ಮೀಸಲಿಡಬೇಕು’ ಎಂದು ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಹೇಳಿದರು.

ಗ್ರಾಮದಲ್ಲಿ ಸಂಗೀತ ಕಲಾವಿದ ದಿ.ಮೋಹನಗೌಡ ಪಾಟೀಲ ಅವರ 10ನೇ ಪುಣ್ಯಸ್ಮರಣೆ ಅಂಗವಾಗಿ ಶಿಷ್ಯರ ಬಳಗವು ಶುಕ್ರವಾರ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಂಗೀತ ಕ್ಷೇತ್ರಕ್ಕೆ ಮೋಹನಗೌಡ ಪಾಟೀಲರ ಕೊಡುಗೆ ಅಪಾರವಾಗಿದೆ. ಅವರ ಶಿಷ್ಯರು ಪರಂಪರೆ ಮುಂದುವರಿಸಿಕೊಂಡು ಹೋಗಬೇಕು. ಗ್ರಾಮೀಣ ಕಲಾವಿದರು ವೇದಿಕೆ ಬಳಸಿಕೊಂಡು ಪ್ರತಿಭೆ ಅನಾವರಣಗೊಳಿಸಬೇಕು. ಸಂಗೀತದ ಮೂಲಕವೇ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು’ ಎಂದರು.

ಮುಖಂಡ ರಾಮನಗೌಡ ತಿಪರಾಶಿ, ‘ಕೋವಿಡ್ ಕಾರಣದಿಂದ ಕಲಾವಿದರು ಒಂದೂವರೆ ವರ್ಷದಿಂದಲೂ ಸಂಕಷ್ಟದಲ್ಲಿದ್ದಾರೆ. ಜೀವನ ನಿರ್ವಹಣೆಗೆ ಹೆಣಗಾಡುತ್ತಿದ್ದಾರೆ. ಸರ್ಕಾರ ಅವರಿಗೆ ನೆರವಾಗಬೇಕು’ ಎಂದು ಒತ್ತಾಯಿಸಿದರು.

ಕೊರೊನಾ ಸೇನಾನಿಗಳಾದ ಉಗರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಯನ್ನು ಸತ್ಕರಿಸಲಾಯಿತು.

ಮುಖಂಡರಾದ ಶಿವನಗೌಡ ಮೇದಗೊಪ್ಪ, ಅಲ್ಲಮಪ್ರಭು ಪ್ರಭುನವರ, ಡಾ.ರಿಯಾಜ್ ಮೆಣಸಿನಕಾಯಿ, ಡಾ.ಜ್ಯೋತಿ ಬಸರಿ, ಎ.ಕೆ.ಮುಲ್ಲಾ, ಅನಿಲ ಗುಡಿಮನಿ, ಮುಗುಟಸಾಬ ಗೂಡುನವರ, ಶಂಕರ ಶಿದ್ದಿಬಾವಿ, ಐ.ವೈ. ಬಾರಕೇರ, ಶೇಖಯ್ಯ ಹಿರೇಮಠ, ಶಂಕ್ರಯ್ಯ ಸಂಬಯ್ಯನಮಠ, ರಮೇಶ ಪಾಟೀಲ, ಯಲ್ಲಪ್ಪ ಕೊಪ್ಪದ, ಹನುಮಂತ ಸಿದ್ದಕ್ಕನವರ, ಮುತ್ತು ಹನಸಿ, ಶಂಕ್ರಯ್ಯ ಸಂಬಯ್ಯನಮಠ, ಅಡವೇಶ ಕಡಕೊಳ, ಮಲ್ಲನಗೌಡ ಪಾಟೀಲ, ರಾಜು ಪಾಟೀಲ ಇದ್ದರು.

ಸದ್ದಾಂ ಗೂಡುನವರ ಸ್ವಾಗತಿಸಿದರು. ಇಮಾಮಹುಸೇನ ಗೂಡುನವರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು