ಬೆಳಗಾವಿ: ಸಾಂಬ್ರಾದಿಂದ ಜೋಧಪುರ, ನಾಗಪುರಕ್ಕೆ ವಿಮಾನ

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್ ವಿಮಾನ ಸಂಸ್ಥೆಯು ಜೋಧಪುರ ಹಾಗೂ ನಾಗಪುರಕ್ಕೆ ವಿಮಾನ ಕಾರ್ಯಾಚರಣೆ ಆರಂಭಿಸುವುದಾಗಿ ಪ್ರಕಟಿಸಿದೆ.
ಫೆ. 16ರಿಂದ ಜೋಧಪುರ ಮತ್ತು ಮಾರ್ಚ್ 16ರಿಂದ ನಾಗಪುರಕ್ಕೆ ವಿಮಾನ ಹಾರಾಟ ಆರಂಭವಾಗಲಿದೆ. ಬೆಳಗಾವಿ–ನಾಗಪುರ, ಬೆಳಗಾವಿ– ಜೋಧಪುರ ನಡುವೆ ವಾರದಲ್ಲಿ 3 ದಿನಗಳು ಅಂದರೆ ಮಂಗಳವಾರ, ಗುರುವಾರ ಹಾಗೂ ಭಾನುವಾರ ವಿಮಾನ ಇರಲಿದೆ.
ಜೋಧಪುರ ವಿಮಾನವು ಫೆ. 16ರಿಂದ, ಬೆಳಗಾವಿಯಿಂದ ಬೆಳಿಗ್ಗೆ 10ಕ್ಕೆ ಹೊರಟು 12.10ಕ್ಕೆ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 12.40ಕ್ಕೆ ಹೊರಟು ಮಧ್ಯಾಹ್ನ 2.50ಕ್ಕೆ ಬಂದು ತಲುಪಲಿದೆ. ನಾಗಪುರ ವಿಮಾನವು ಮಾರ್ಚ್ 16ರಿಂದ ಮಧ್ಯಾಹ್ನ 3.20ಕ್ಕೆ ಬೆಳಗಾವಿಯಿಂದ ಹೊರಟು ಸಂಜೆ 4.45ಕ್ಕೆ ನಾಗಪುರ ತಲುಪಲಿದೆ. ಅಲ್ಲಿಂದ ಸಂಜೆ 5.10ಕ್ಕೆ ಹೊರಟು 6.35ಕ್ಕೆ ಸಾಂಬ್ರಾ ತಲುಪಲಿದೆ ಎಂದು ಪ್ರಕಟಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.