ಬೆಳಗಾವಿ: ರಾಜ್ಯದ ಅತ್ಯಂತ ಸುಂದರ, ಸಮೃದ್ಧ ಹಾಗೂ ಹರಿದ್ವರ್ಣ ಕಾಡು ಭೀಮಗಡ ಅಭಯಾರಣ್ಯ. ಈಗ ಈ ಅಭಯಾರಣ್ಯಕ್ಕೇ ಭಯ ಎದುರಾಗಿದೆ. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ರಾಜ್ಯ ಸರ್ಕಾರ ಇಲ್ಲಿ ಅರಣ್ಯ ಸಫಾರಿ ಆರಂಭಿಸಲು ಉದ್ದೇಶಿಸಿದೆ. ಸಹಜವಾಗಿಯೇ ಇದು ಕಾನನದ ಕೂಸುಗಳಿಗೆ ಚಿಂತೆ ತಂದೊಡ್ಡಿದೆ.

ಅಸಂಖ್ಯಾತ ವನ್ಯಮೃಗಗಳು, ಪ್ರಾಣಿ, ಪಕ್ಷಿಗಳು, ಸಸ್ಯಕಾಶಿ, ಜೀವ– ಜಂತುಗಳಿಗೆ ಈ ಅಭಯಾರಣ್ಯವೇ ತಾಯಿಯಾಗಿದೆ, ತೊಟ್ಟಿಲಾಗಿದೆ, ತವರಾಗಿದೆ.

ಇವುಗಳ ಮಧ್ಯೆ ಈಗ ಮನುಷ್ಯ ಪ್ರಾಣಿಗಳು ಓಡಾಡುತ್ತವೆ ಎಂಬ ಸಂಗತಿ ಪ್ರಕೃತಿಗೆ ವಿರುದ್ಧವಾದುದು. ಹೀಗಾಗಿ, ಸಹಜವಾದ ಗೊಂದಲ ನಿರ್ಮಾಣವಾಗಿದೆ.

ಇಲ್ಲಿ 18 ಕಿ.ಮೀ ಉದ್ದದ ಸಫಾರಿ ಆರಂಭಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಸುಮಾರು 14 ಹಳ್ಳಿಗಳು ಬರುತ್ತವೆ. ಅಂದಾಜು 3,000ಕ್ಕೂ ಹೆಚ್ಚು ವನವಾಸಿಗಳು ಇದ್ದಾರೆ. ಒಂದು ವೇಳೆ ಸಫಾರಿ ಆರಂಭಿಸುವುದೇ ನಿಜವಾದರೆ ಈ ಹಳ್ಳಿಗಳ ಜನರನ್ನು ಅರಣ್ಯದಿಂದ ಒಕ್ಕಲೆಬ್ಬಿಸಬೇಕಾಗುತ್ತದೆ.

ಅಭಯಾರಣ್ಯದಲ್ಲಿ ಯಾವುದೇ ಚಾರಣ, ಕಾಮಗಾರಿ, ಅಭಿವೃದ್ಧಿ ಕೆಲಸ, ನಿವೇಶನ ಅಥವಾ ಯಾವುದೇ ಚಟುವಟಿಕೆ ನಡೆಸಲು ಅವಕಾಶವಿಲ್ಲ. ಆದರೆ, ಈವರೆಗಿನ ಎಲ್ಲ ಸರ್ಕಾರಗಳೂ ಕಾಯ್ದೆಗಳನ್ನು ತಿದ್ದುಪಡಿ ಮಾಡಿ, ಸಡಿಲಿಕೆಯ ಲಾಭ ಪಡೆದು ಹಣ ಗಳಿಸುವ ಕೆಲಸಗಳನ್ನು ಮಾಡುತ್ತಲೇ ಇವೆ.

ಬಂಡೀಪುರ, ನಾಗರಹೊಳೆ, ಭದ್ರಾ ಹುಲಿ ಮೀಸಲು ಪ್ರದೇಶ, ಕುದುರೆಮುಖ, ದರೋಜಿ ಕರಡಿ ಧಾಮಗಳಲ್ಲಿ ಈಗಾಗಲೇ ಸಫಾರಿ, ಚಾರಣದ ಕಾರಣ ತೊಂದರೆಗಳು ಎದುರಾಗಿವೆ. ದಶಕದಿಂದ ದಶಕಕ್ಕೆ ಈ ಪ್ರದೇಶದಲ್ಲಿ ವನ್ಯಜೀವಿಗಳ ಸಂಖ್ಯೆ ಇಳಿಯುತ್ತ ಸಾಗಿದೆ. ಮಾನವ ಚಟುವಟಿಕೆಗಳು ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂಬುದನ್ನು ಅರಣ್ಯ ಇಲಾಖೆಯ ಅಂಕಿ ಅಂಶಗಳು ಖಚಿತಪಡಿಸುತ್ತವೆ.

ಈಗ ಇಂಥದ್ದೇ ಸಮಸ್ಯೆಯನ್ನು ಭೀಮಗಡ ಅಭಿಯಾರಣ್ಯ ಕೂಡ ಎದುರಿಸುತ್ತಿದೆ. ಜಿಲ್ಲೆಯ ಅರಣ್ಯ ವಾಸಿಗಳು, ಅರಣ್ಯ ಪ್ರಿಯರು, ಪರಿಸರ ಸಂರಕ್ಷಕರು, ಹೋರಾಟಗಾರರು, ವನ್ಯಜೀವ ಸಂರಕ್ಷಣಾ ಸಂಘಟನೆಗಳು ಧ್ವನಿ ಎತ್ತಿವೆ. ಯಾವುದೇ ಕಾರಣಕ್ಕೂ ಅಭಯಾರಣ್ಯದಲ್ಲಿ ಸಫಾರಿಗೆ ಅವಕಾಶ ನೀಡುವುದಿಲ್ಲ ಎಂದು ಹೋರಾಟಕ್ಕೆ ಮುಂದಾಗಿವೆ. ಮೊದಲ ಹೆಜ್ಜೆಯಲ್ಲೇ ಈ ಯೋಜನೆ ದೊಡ್ಡ ಮಟ್ಟದ ವಿರೋಧ ಎದುರಿಸುವಂತಾಗಿದೆ.

ಭೀಮಗಡದ ವಿಶೇಷತೆ ಏನು?: ಭೀಮಗಡವನ್ನು 2011ರಲ್ಲಿ ಅಭಯಾರಣ್ಯ ಎಂದು ಘೋಷಣೆ ಮಾಡಲಾಗಿದೆ. ಸುಮಾರು 190 ಚದರ್ ಕಿ.ಮೀ ಪ್ರದೇಶದ ವ್ಯಾಪ್ತಿಯನ್ನು ಇದರೊಳಗೆ ಗುರುತಿಸಲಾಗಿದೆ.

ವಿಶ್ವದಲ್ಲೇ ಅತ್ಯಂತ ವಿಶಿಷ್ಟವಾದ, ಅಳಿವಿನ ಅಂಚಿನಲ್ಲಿರುವ ಬಾವಲಿಗಳ ಸಂರಕ್ಷಿತ ತಾಣವಿದು. ಈ ಅಭಯಾರಣ್ಯದಲ್ಲಿರುವ ಗುಹೆಗಳಲ್ಲಿ ಬಾವಲಿಗಳು ಸಂತಾನೋತ್ಪತ್ತಿ ಮಾಡುತ್ತವೆ. ಹೀಗಾಗಿ, ಇಲ್ಲಿನ ಮಾನವ ಸಂಚಾರ ನಿರ್ಬಂಧಿಸಲಾಗಿದೆ.

ಮಲ್ಬಾರ್, ಬೂದು ಹಾರ್ನ್ಬಿಲ್, ವಿಶಿಷ್ಟ ಸಾಮ್ರಾಜ್ಯಶಾಹಿ ಪಾರಿವಾಳಗಳು, ಪಚ್ಚೆ ಪಾರಿವಾಳ, ಹುಲಿ, ಚಿರತೆ, ಕರಡಿ, ಜಿಂಕೆ, ಕಾಡುಕೋಣ, ಆನೆಗಳು ಸೇರಿ ಅಪಾರ ಸಂಖ್ಯೆಯ ವನ್ಯಜೀವಿಗಳು ಇಲ್ಲಿವೆ.

ಜನ ಏನಂತಾರೆ?

ಮಳೆಗೂ ನದಿಗಳಿಗೂ ಕುತ್ತು

ಭೀಮಗಡ ಅಭಯಾರಣ್ಯದಲ್ಲಿ ಅಪಾರ ಜೀವ ಸಂಕುಲಗಳಿವೆ. ಈ ಅರಣ್ಯದಿಂದಲೇ ಖಾನಾಪುರ ತಾಲ್ಲೂಕು ಹಾಗೂ ಅಕ್ಕಪಕ್ಕದ ತಾಲ್ಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತದೆ. ಇದೇ ಅರಣ್ಯದಲ್ಲಿ ಮಲಪ್ರಭಾ ಹಾಗೂ ಮಹದಾಯಿ ನದಿಗಳು ಜೀವಿಸುತ್ತಿವೆ. ಅರಣ್ಯಕ್ಕೆ ಧಕ್ಕೆ ಮಾಡುವ ಯಾವುದೇ ಯೋಜನೆ ಕೈಗೊಳ್ಳಬಾರದು.

–ಸ್ನೇಹಲ್ ಕುಲಕರ್ಣಿ ಗೃಹಿಣಿ ಖಾನಾಪುರ

ಆರ್ಥಿಕ ಉತ್ತೇಜನವಾಗುತ್ತದೆ

ಈಗಾಗಲೇ ದಕ್ಷಿಣ ಕರ್ನಾಟಕ ಭಾಗದ ಅಭಯಾರಣ್ಯಗಳಲ್ಲಿ ಚಾರಣ ಮತ್ತು ಸಫಾರಿಯಂಥ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಅದರಿಂದ ಉತ್ತಮ ಆದಾಯ ಬಂದು ಪ್ರಗತಿಗೆ ದಾರಿಯಾಗಿದೆ. ಭೀಮಗಡ ಅರಣ್ಯವು ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಸಮೃದ್ಧವಾಗಿದೆ. ಇಲ್ಲಿಯೂ ಸಫಾರಿ ಆರಂಭಿಸಿದರೆ ಉತ್ತಮ ಆದಾಯ ನಿರೀಕ್ಷಿಸಬಹುದು. ಅಲ್ಲದೇ ಪ್ರವಾಸೋದ್ಯಮದಿಂದ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ಕಾಡಿಗೆ ತೊಂದರೆಯಾಗದ ರೀತಿಯಲ್ಲಿ ಸಫಾರಿ ಆರಂಭಿಸಬಹುದು.

–ವಿನಯ ಹಿರೇಮಠ ಖಾಸಗಿ ಶಾಲೆ ಶಿಕ್ಷಕ ಬೆಳಗಾವಿ

ಕೊಡಗಿನ ಸ್ಥಿತಿ ಬಾರದಿರಲಿ ಈ ಹಿಂದೆ ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅರಣ್ಯದಲ್ಲಿ ಮಾನವ ಚಟುವಟಿಕೆಗಳು ಆರಂಭವಾದವು. ಅವುಗಳನ್ನು ಪೋಷಣೆ ಮಾಡಲು ಹೋಂ ಸ್ಟೇಗಳು ಹೋಟೆಲ್ ರೆಸ್ಟಾರೆಂಟ್ ಬಾರ್ಗಳೂ ಆರಂಭವಾದವು. ಇದರಿಂದ ಪ್ಲಾಸ್ಟಿಕ್ ಬಳಕೆ ವಿದ್ಯುತ್ ಅವಘಡಗಳೂ ಹೆಚ್ಚಿದವು. ಕೊಡಗಿನ ಅರಣ್ಯ ಆತಂಕಕ್ಕೆ ಸಿಲುಕಿತು. ಅಂಥ ಪರಿಸ್ಥಿತಿ ಭೀಮಗಡಕ್ಕೆ ಬರಬಾರದು

–ಪ್ರತಾಪ ದೇಸಾಯಿಕರ ಪರಿಸರ ಪ್ರೇಮಿ

‘ಸಫಾರಿಯ ಉದ್ದೇಶವೇ ಇಲ್ಲ’

‘ಭೀಮಗಡ ಅಭಯಾರಣ್ಯದಲ್ಲಿ ಸಫಾರಿ ಆರಂಭ ಮಾಡುವ ಯಾವುದೇ ಉದ್ದೇಶ ಅರಣ್ಯ ಇಲಾಖೆಯ ಮುಂದೆ ಇಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರಸ್ತಾವ ಮಾತ್ರ ಸಲ್ಲಿಕೆಯಾಗಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೂ ಅಂತಿಮವಾಗಿ ಇನ್ನೂ ನಿರ್ಧಾರವಾಗಿಲ್ಲ’ ಎಂದು ಡಿಸಿಎಫ್ ಮರಿಯಾ ಕ್ರಿಸ್ತೊ ರಾಜಾ ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು. ‘ಅಭಯಾರಣ್ಯದಲ್ಲಿ ಸಫಾರಿ ಆರಂಭಿಸುವ ಪ್ರಸ್ತಾವಕ್ಕೆ ಈಗಾಗಲೇ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದ್ದು ಗಮನಕ್ಕೆ ಬಂದಿದೆ. ಈ ನಿರ್ಧಾರ ಸರ್ಕಾರದ ಮಟ್ಟದಲ್ಲಿ ನಡೆಯುತ್ತದೆ. ಸದ್ಯ ನಮ್ಮ ಇಲಾಖೆಯ ಮುಂದೆ ಇಂಥ ಯಾವುದೇ ಉದ್ದೇಶವಿಲ್ಲ’ ಎಂದು ಹೇಳಿದರು.

ಒಂದು ಮೊಬೈಲ್ ಟವರ್ಗೂ ಅನುಮತಿ ಇಲ್ಲ

ಖಾನಾಪುರ ತಾಲ್ಲೂಕಿನಲ್ಲಿ ಮೈಚಾಚಿರುವ ಭೀಮಗಡ ಅಭಯಾರಣ್ಯವು ಮಲೆನಾಡ ಸೆರಗಿನ ಮಹತ್ವದ ಜಾಗ. ಇದರ ಸೊಬಗು ಇಡೀ ಜಿಲ್ಲೆಗೆ ಕಳಶಕೀರ್ತಿಯಾಗಿದೆ. ಸಫಾರಿ ಆರಂಭಿಸಿದ ತಕ್ಷಣ ಇಡೀ ಅರಣ್ಯ ನಾಶವಾಗುತ್ತದೆ ಅಥವಾ ಕುತ್ತು ಬಂದೊದಗುತ್ತದೆ ಎಂದೇನಿಲ್ಲ. ಆದರೆ ವನವಾಸದ ಜೀವಗಳಿಗೆ ಧಕ್ಕೆ ಆಗುವುದು ನಿಶ್ಚಿತ ಎನ್ನುತ್ತಾರೆ ಪರಿಸರಪ್ರಿಯರು. ಈ ಹಿಂದೆ ಇದೇ ಅಭಯಾರಣ್ಯದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮೊಬೈಲ್ ಕಂಪನಿಗಳು ಮುಂದೆ ಬಂದಿದ್ದವು. ಆದರೆ ಒಂದೇ ಒಂದು ಟವರ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಲಿಲ್ಲ. ಮೊಬೈಲ್ ಟವರ್ನಿಂದ ಹೊರಸೂಸುವ ಕಿರಣಗಳು ಪ್ರಾಣಿ– ಪಕ್ಷಿ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂಬ ಅಧ್ಯಯನ ವರದಿ ಆಧರಿಸಿ ಅದನ್ನು ತಡೆಯಲಾಯಿತು. ಅಂಥ ಜಾಗದಲ್ಲೇ ಈಗ ಕಾಮಗಾರಿ ಮಾಡಿ ಸಫಾರಿ ಆರಂಭಿಸಿದರೆ ಹೇಗೆ ಎಂಬುದು ಹೋರಾಟಗಾರರ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.