ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ ಅಂಗವಾಗಿ ಮುಜರಾಯಿ ದೇವಸ್ಥಾನಗಳಲ್ಲಿ ಕುಂಕುಮಾರ್ಚನೆ: ಸಚಿವೆ ಜೊಲ್ಲೆ

Last Updated 30 ಸೆಪ್ಟೆಂಬರ್ 2022, 17:09 IST
ಅಕ್ಷರ ಗಾತ್ರ

ಹುಕ್ಕೇರಿ: ನವರಾತ್ರಿ ಅಂಗವಾಗಿ ರಾಜ್ಯದ 15 ಸಾವಿರ ದೇವಾಲಯಗಳಲ್ಲಿ ಕುಂಕುಮಾರ್ಚನೆ ಮಾಡುವಂತೆ ರಾಜ್ಯ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ. ಹುಕ್ಕೇರಿ ಹಿರೇಮಠದ ದಸರಾ ಮಹೋತ್ಸವದಲ್ಲಿ ದುರ್ಗಾದೇವಿಯ ಶ್ರೀಚಕ್ರಕ್ಕೆ ಕುಂಕುಮಾರ್ಚನೆ ಮಾಡುವ ಮೂಲಕ ರಾಜ್ಯದ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಶುಕ್ರವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಶಿಕಲಾ ಜೊಲ್ಲೆ ಅವರು, ಭಾರತ ದೇಶದ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಠ ಮಂದಿರಗಳ ಪಾತ್ರ ಪ್ರಮುಖವಾಗಿದ್ದು, ಹುಕ್ಕೇರಿ ಹಿರೇಮಠದ ದಸರಾ ಮಹೋತ್ಸವದಲ್ಲಿ ಕುಂಕುಮಾರ್ಚನೆ ಮಾಡುವ ಸುಯೋಗ ದೊರೆತಿದ್ದು ನನ್ನ ಭಾಗ್ಯ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮತ್ತು ಶಶಿಕಲಾ ಜೊಲ್ಲೆ ದಂಪತಿಯನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಸನ್ಮಾನಿಸಿ ಆಶೀರ್ವದಿಸಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ, ಮುಖಂಡರಾದ ವಿಜಯ್ ರವದಿ, ಜಯಗೌಡ ಪಾಟೀಲ, ಪ್ರಜ್ವಲ್ ನಿಲಜಗಿ, ಮಹಾವೀರ ಬಾಗಿ, ಗುರು ಪಾಟೀಲ, ಚಿದು ಕಿಲ್ಲೇದಾರ, ಸುರೇಶ್ ಜಿನರಾಳಿ, ಎಸ್.ಎಂ.ಣಾನಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT