ಭಾನುವಾರ, ಮೇ 16, 2021
26 °C

ಕೆಎಲ್ಇ ಆಸ್ಪತ್ರೆಯಲ್ಲಿ ‘ಬೈ–ಪ್ಲೇನ್ ಕ್ಯಾಥ್‌ಲ್ಯಾಬ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು, ಅತ್ಯಾಧುನಿಕ ಚಿಕಿತ್ಸೆ ಕಲ್ಪಿಸಲು ‘ಬೈ– ಪ್ಲೇನ್ ಕ್ಯಾಥ್‌ಲ್ಯಾಬ್‌’ ಸ್ಥಾಪಿಸಿದೆ. ಇದನ್ನು ಏ. 10ರಂದು ಬೆಳಿಗ್ಗೆ 10ಕ್ಕೆ ಕೇಂದ್ರದ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಭಾಗವಹಿಸಲಿದ್ದಾರೆ.

‘ಈ ಭಾಗದ ಪ್ರಥಮ ಲ್ಯಾಬ್ ಇದಾಗಿದೆ. ತೆರೆದ ಶಸ್ತ್ರಕ್ರಿಯೆ ಬದಲಿಗಗೆ ಚಿಕ್ಕ ರಂದ್ರದ ಮೂಲಕ ಸ್ಟೆಂಟ್ ಅಳವಡಿಸಿ ರೋಗಿಗಳನ್ನು ಶೀಘ್ರವೇ ಗುಣಮುಖಗೊಳಿಸುವಲ್ಲಿ ಸಹಕಾರಿಯಾಗಿದೆ. ಇದು ಡಿಎಸ್‌ಎ ಸಿಟಿ ಎಂಆರ್‌ಐ ಒಳಗೊಂಡಿದ್ದು, ಮಿದುಳಿನಲ್ಲಿ ಉಂಟಾಗುವ ಪಾರ್ಶ್ವವಾಯುವಿನಿಂದ ರಕ್ತನಾಳಗಳ ಮುದುಡುವಿಕೆ ಸೇರಿದಂತೆ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಸಹಕಾರಿ ಆಗಲಿದೆ. ₹ 5 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಈ ವಿಭಾಗದಲ್ಲಿ ತಜ್ಞವೈದ್ಯರಾದ ಡಾ.ನವೀನ ಮೂಲಿಮನಿ ಹಾಗೂ ಡಾ.ಅಭಿನಂದನ್ ರೂಗೆ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು