ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತರಕಾರಿ ಬೆಳೆಗಾರರಿಗೆ ಹೆಚ್ಚುವರಿ ಶುಲ್ಕ ಇಲ್ಲ: ತಹಶೀಲ್ದಾರ ಮಂಜುಳಾ

Published : 8 ಆಗಸ್ಟ್ 2024, 15:58 IST
Last Updated : 8 ಆಗಸ್ಟ್ 2024, 15:58 IST
ಫಾಲೋ ಮಾಡಿ
Comments

ಸಂಕೇಶ್ವರ: ಪಟ್ಟಣದ ದುರದುಂಡೀಶ್ವರ ಸಗಟು ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಮುಂದಿನ ಸಭೆಯವರೆಗೂ ಈಗಿರುವ ಸೇವಾ ಶುಲ್ಕವನ್ನು ರದ್ದು ಮಾಡಲಾಗಿದೆ ಎಂದು ತಹಶೀಲ್ದಾರ್‌ ಮಂಜುಳಾ ನಾಯಿಕ ಹೇಳಿದರು.

ಪಟ್ಟಣದ ಸಗಟು ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಮುಖಂಡರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಮಾತನಾಡಿದ ಅವರು, ಕಾಯಿಪಲ್ಲೆ ಮಾರುಕಟ್ಟೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಿದ್ದು, ರೈತರು ಹಾಗೂ ಮಾರುಕಟ್ಟೆ ಸಮಿತಿಯೊಂದಿಗೆ ಶೀಘ್ರದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಮುಂಬರುವ ಸಂಧಾನಸಭೆ ವರೆಗೂ ಸೇವಾ ಶುಲ್ಕ ಹಾಗೂ ಇತರ ಶುಲ್ಕವನ್ನು ಪಡೆಯುವಂತಿಲ್ಲ ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಚ ಚೂನ್ನಪ್ಪಾ ಪೂಜಾರಿ ಮಾತನಾಡಿ, ಮಾರುಕಟ್ಟೆ ಸಮಿತಿಯಲ್ಲಿ ದಲ್ಲಾಳಿಗಳು ನಾನಾ ರೀತಿ ಮೋಸಗಳನ್ನು ಮಾಡುತ್ತಿದ್ದು, ತೂಕದಲ್ಲಿ ವ್ಯತ್ಯಾಸ, ದರ ಕಡಿತ, ಹೆಚ್ಚುವರಿ ಸೇವಾಶುಲ್ಕ, ಸಮಯಕ್ಕೆ ಸರಿಯಾಗಿ ಹಣಪಾವತಿಸದೇ ಇರುವುದು, ದಲ್ಲಾಳಿಗಳ ದುರ್ವರ್ತನೆ ಹೀಗೆ ಹಲವು ಸಮಸ್ಯೆಗಳಿವೆ ಎಂದರು.

ಪುರಸಭೆ ಸದಸ್ಯ ಸುನೀಲ ಪರ್ವತರಾವ ಮಾತನಾಡಿ, ನಿಡಸೋಸಿ ಶ್ರೀಮಠವೂ ಯಾವತ್ತೂ ರೈತರ ಪರವಾಗಿದ್ದು ಮಾರುಕಟ್ಟೆಯಲ್ಲಿ ಆಗಿರುವ ಸಮಸ್ಯೆಯನ್ನು ಸರಿಪಡಿಸಲಾಗುವುದು. ಈ ನಿಟ್ಟಿನಲ್ಲಿ ನಿಡಸೋಸಿ ಶ್ರೀಗಳು ಹಾಗೂ ಶಾಸಕ ನಿಖಿಲ್ ಕತ್ತಿ ಉಪಸ್ಥಿತಿಯಲ್ಲಿ ರೈತರ ಹಿತಾಸಕ್ತಿಯನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ಮಾರುಕಟ್ಟೆ ಸಮಿತಿ ಉಸ್ತುವಾರಿ ದಸ್ತಗಿರ ತೇರಣಿ, ಈಗಾಗಲೇ ಆಗಿರುವ ಪ್ರಮಾದಕ್ಕೆ ಕ್ಷಮೆ ಕೇಳುವುದಾಗಿ ಹೇಳಿದರು.

ರೈತರನ್ನು ನಿಂದಿಸಿದ್ದ ಸಿಬ್ಬಂದಿ ಸೋಹೆಲ್ ಜಮಾದಾರ ರೈತರಲ್ಲಿ ಕ್ಷಮೆಯಾಚಿಸಿದರು.

ರೈತರ ಸಮ್ಮುಖದಲ್ಲಿಯೇ ಸೌದಾ ಮಾಡುವಂತೆ, ಮಾರುಕಟ್ಟೆ ಮಧ್ಯಭಾಗದಲ್ಲಿ ರೈತರಿಗೆ ವ್ಯಾಪಾರ ಮಾಡಲು ಸಮಿತಿ ಜಾಗವನ್ನು ಮೀಸಲಿಡುವುದು, ಮಠದ ಕಮಿಟಿಯವರೇ ರೈತರಿಂದ ಸೇವಾ ಶುಲ್ಕ ವಸೂಲಿ ಮಾಡುವುದು, ಮಾರುಕಟ್ಟೆಯ ಮುಖ್ಯದ್ವಾರಗಳನ್ನು ಬೆಳಿಗ್ಗೆ 4 ರಿಂದ ರಾತ್ರಿ 12ರ ವರೆಗೆ ತೆರೆಯುವುದು, ತರಕಾರಿ ತಂದ ಹಾಗೂ ಖರೀದಿ ಮಾಡಿದವರಿಗೆ ಯಾವುದೇ ರೀತಿ ಸೇವಾ ಶುಲ್ಕ ಪಡೆಯದೇ ಇರುವುದು ಸೇರಿದಂತೆ ಇತರ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ತಹಶೀಲ್ದಾರ್‌ಗೆ ಮನವಿ ನೀಡಲಾಯಿತು.

ಪುರಸಭೆ ಮಾಜಿ ಸದಸ್ಯ ರೋಹಣ ನೇಸರಿ, ರೈತ ಮುಖಂಡರಾದ ಪ್ರಕಾಶ ನಾಯ್ಕ, ಶಿವಲಿಂಗ ಪಾಟೀಲ, ಶಶಿಕಾಂತ ನಾಯ್ಕ, ನಾಗರಾಜ ಹಾದಿಮನಿ, ಮಲ್ಲಪ್ಪ ಬೇಲನ್ನವರ, ರವೀಂದ್ರ ಚಿಕ್ಕೋಡಿ, ಸಚಿನ್ ಬನ್ನೆ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT