ಬೆಳಗಾವಿ: ಛತ್ರಪತಿ ಶಿವಾಜಿ ಹಾಗೂ ಹಿಂದೂ ದೇವತೆಗಳ ಚಿತ್ರಗಳಿಗೆ ಅಶ್ಲೀಲ ಚಿತ್ರಗಳನ್ನು ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಚಿತ್ರಗಳು ಮಂಗಳವಾರ ನಗರದ ಹಲವರ ಮೊಬೈಲ್‌ಗಳಿಗೂ ಬಂದಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮ್ ಜಿಂದಾಬಾದ್ 786, ಕಿಂಗ್ ಕಿ ಜಾನ್, ಇಟ್ಸ್ ಅರ್ಮಾನ್ ಟೈಗರ್, ಆರ್.ಎಕ್ಸ್.ಇಮ್ರಾನ್, ಪ್ರಸಾದ್... ಎಂಬ ಹೆಸರಿನ ಖಾತೆಗಳಲ್ಲಿ ಈ ಪೋಸ್ಟರ್‌ಗಳು ಅಪ್ಲೋಡ್ ಆಗಿವೆ. ಕೆಲವು ಎರಡು ದಿನಗಳ ಹಿಂದೆ ಅಪ್ಲೋಡ್ ಮಾಡಿದ್ದು, ಇನ್ನು ಕೆಲವನ್ನು ಮಂಗಳವಾರವೇ ಹಾಕಲಾಗಿದೆ.

ಈ ಪೋಸ್ಟ್‌ಗಳಲ್ಲಿ ‘ಪೋರ್ನ್‌ಸ್ಟಾರ್’ಗಳ ದೇಹಕ್ಕೆ ಶಿವಾಜಿ ಭಾವಚಿತ್ರ ಅಂಟಿಸಿ ಅವಮಾನಿಸಲಾಗಿದೆ. ಉರ್ದು ಹಾಗೂ ಪರ್ಷಿಯನ್ ಭಾಷೆಯಲ್ಲಿ ಅಶ್ಲೀಲ ಪದ ಬಳಸಲಾಗಿದೆ. ಈ ಪೋಸ್ಟ್‌ಗಳಿಗೆ ಲೈಕ್, ಶೇರ್, ಫಾಲೊ ಹಾಗೂ ಕಮೆಂಟ್‌ಗಳನ್ನೂ ಮಾಡಲಾಗಿದೆ.

ಶಿವ–ಪಾರ್ವತಿ, ಶ್ರೀರಾಮ–ಹನುಮಂತ, ಲಕ್ಷ್ಮಿ–ಸರಸ್ವತಿಯರ ಫೋಟೋಗಳನ್ನೂ ಅಶ್ಲೀಲವಾಗಿ ತಿರುಚಿ ಅಪ್ಲೋಡ್ ಮಾಡಲಾಗಿದೆ.

ಬಂಧನಕ್ಕೆ ಆಗ್ರಹ:

‘ಶಿವಾಜಿ ಮಹಾರಾಜರ ಫೋಟೊ ಬಳಸಿ ಅವಮಾನ ಮಾಡಿದ ದುರುಳರನ್ನು ತಕ್ಷಣ ಬಂಧಿಸಬೇಕು. ಅವರ ಮೇಲೆ ಸಣ್ಣಪುಟ್ಟ ಕೇಸ್‌ಗಳನ್ನು ಹಾಕಿ ಕೈತೊಳೆದುಕೊಳ್ಳದೇ ಉಗ್ರ ಶಿಕ್ಷೆ ಆಗುವಂತೆ ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಶಾಂತಿ ಕದಡುವ ಹಾಗೂ ಮಹಾತ್ಮರಿಗೆ ಅವಮಾನ ಮಾಡುವವರಿಗೆ ಉತ್ತರ ಪ್ರದೇಶ ಮಾದರಿಯಲ್ಲಿ ಶಿಕ್ಷೆ ಕೊಡಬೇಕು’ ಎಂದು ಶಾಸಕ ಅಭಯ ಪಾಟೀಲ ಆಗ್ರಹಿಸಿದರು.

ವಿವಿಧ ಸಮಾಜದ ಮುಖಂಡರೊಂದಿಗೆ ನಗರ ಪೊಲೀಸ್ ಕಮಿಷನರ್ ಡಾ.ಎಂ.ಬಿ. ಬೋರಲಿಂಗಯ್ಯ ಅವರನ್ನು ಭೇಟಿ ಮಾಡಿದ ಶಾಸಕ, ‘ಶಿವಾಜಿ ಮಹಾರಾಜರು ಶಿವ ಸ್ವರೂಪ. ಅವರ ಚಿತ್ರಗಳನ್ನು ಬಳಸಿ ಅತ್ಯಂತ ಅಶ್ಲೀಲವಾಗಿ ಅವಮಾನಿಸಲಾಗಿದೆ. ಇದನ್ನು ಸಹಿಸಲಸಾಧ್ಯ. ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದೂ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.