ಬೆಳಗಾವಿ: ಈರುಳ್ಳಿ ಬೆಲೆ ಕಳೆದ ವಾರ ಕಡಿಮೆಯಾಗಿತ್ತು. ಇದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಕೆಲವೇ ದಿನಗಳಲ್ಲಿ ದರ ಮತ್ತೆ ಏರಿಕೆಯಾಗಿದೆ. ಇದರಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ.

ಅಕ್ಟೋಬರ್ ತಿಂಗಳವರೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. ಈರುಳ್ಳಿಗೆ ₹ 25ರಿಂದ ₹ 30ರವರೆಗೆ ಇದ್ದ ಈರುಳ್ಳಿ ದರ, ನವೆಂಬರ್ ಹೊತ್ತಿಗೆ ₹ 40ರ ಗಡಿ ದಾಟಿತ್ತು ಹಾಗೂ ₹ 100 ಸಮೀಪಿಸಿತ್ತು.ಡಿಸೆಂಬರ್ ಆರಂಭದಲ್ಲಿ ₹ 200ರ ಗಡಿ ಮುಟ್ಟಿದ ಈರುಳ್ಳಿ, 2ನೇ ವಾರದಲ್ಲಿ (₹ 70–₹ 120) ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಏರಿಕೆ ಕಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 80ರಿಂದ ₹ 170ರವರೆಗೆ ಮಾರಾಟವಾಗುತ್ತಿದೆ.

ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದ ವಾರ ಕ್ವಿಂಟಲ್ಗೆ ₹ 2ಸಾವಿರದಿಂದ₹ 9ಸಾವಿರದವರೆಗೆ ಮಾರಾಟವಾಗಿತ್ತು. ಈ ವಾರದಲ್ಲಿ ₹ 8ಸಾವಿರದಿಂದ ₹ 14ಸಾವಿರಕ್ಕೆ ಮಾರಾಟವಾಗಿದೆ. ಜತೆಗೆ ಈರುಳ್ಳಿ ಆವಕವೂ ಕಡಿಮೆಯಾಗಿದೆ. ಟರ್ಕಿಯಿಂದ ಇಲ್ಲಿಗೆ ಬಂದ ಈರುಳ್ಳಿ ಪ್ರತಿ ಕ್ವಿಂಟಲ್ಗೆ ₹ 10ಸಾವಿರದಿದ ₹ 12ಸಾವಿರಕ್ಕೆ ಮಾರಾಟವಾಗುತ್ತಿದೆ. 20 ಟನ್ಗಳಷ್ಟು ಬಂದಿದ್ದ ಟರ್ಕಿ ಈರುಳ್ಳಿಯನ್ನು ಸಗಟು ₹ 120 ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ₹ 140ಕ್ಕೆ ಮಾರಲಾಗುತ್ತಿದೆ.

ಸೊಪ್ಪಿನ ದರದಲ್ಲಿ ಇಳಿಕೆ ಕಂಡಿದೆ. ಕೊತ್ತಂಬರಿ ಸೊಪ್ಪು (ಒಂದು ಕಂತೆಗೆ ₹ 5ರಿಂದ ₹ 10), ಮೆಂತ್ಯೆ ಸೊಪ್ಪು (₹ 5–₹8 ), ಪುದೀನಾ (₹ 5–₹ 10), ಸಬ್ಬಸಗಿ (₹ 10– ₹ 15)ಬೆಲೆಇಳಿಕೆ ಕಂಡಿದೆ.

ಕಳೆದ ವಾರಕ್ಕೆ ಹೋಲಿಸಿದರೆ ದಾಳಿಂಬೆ ಹಣ್ಣಿದ ದರ ಕಡಿಮಯಾಗಿದೆ. ಕೆ.ಜಿಗೆ (ಹಿಂದಿನ ವಾರ ₹ 40–100) ₹ 100–120 ಇದೆ. ವಿದೇಶದಿಂದ ಆಮದಾಗಿರುವ ಸೀತಾಫಲ ಹಣ್ಣಿಗೆ ಬೆಲೆ ಹೆಚ್ಚಿದೆ. ಕೆ.ಜಿ.ಗೆ ₹160–₹ 180ರವೆಗೆ ಮಾರಾಟವಾಗುತ್ತಿದೆ ಎಂದು ಹಣ್ಣಿನ ವ್ಯಾಪಾರಿ ತಿಳಿಸಿದರು. ಬಾರೆ ಹಣ್ಣು ಕೆ.ಜಿ.ಗೆ ₹ 20– ₹ 40 ಇತ್ತು. ಅನಾನಸ್ (ಒಂದಕ್ಕೆ) ₹ 30ರಿಂದ ₹ 50ರವರೆಗೆ ಇದೆ. ಸೇಬು ಕೆ.ಜಿ.ಗೆ ಸರಾಸರಿ ₹ 60ರಿಂದ ₹ 120 ಇತ್ತು. ಹೋದ ವಾರವೂ ಇಷ್ಟೇ ಇತ್ತು. ಪೇರಲ, ಚಿಕ್ಕು ಹಣ್ಣುಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಕೋಳಿ ಮಾಂಸದ ದರ ಹೆಚ್ಚಳವಾಗಿದೆ. ಕಳೆದವಾರ ಕೆ.ಜೆ.ಗೆ ₹ 150–₹ 160 ಇತ್ತು. ಗುರುವಾರ ₹ 160– ₹ 180ರವರೆಗೆ ಇದೆ. ಕುರಿ ಮಾಂಸದ ದರ (₹ 520–₹ 540) ಹಿಂದಿನ ವಾರದಷ್ಟೇ ಇದೆ. ಮೀನುಗಳಬೆಲೆ ಕೂಡ ವ್ಯತ್ಯಾಸವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.