ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಪ್ಪಾಣಿ | ಮುಂದುವರೆದ ಮಳೆ: ಉಕ್ಕಿ ಹರಿದ ನದಿಗಳು

Published : 22 ಜುಲೈ 2023, 14:36 IST
Last Updated : 22 ಜುಲೈ 2023, 14:36 IST
ಫಾಲೋ ಮಾಡಿ
Comments

ನಿಪ್ಪಾಣಿ: ಮಳೆ ಅಬ್ಬರ ತಾಲೂಕಿನಾದ್ಯಂತ ಮುಂದುವರೆದಿದ್ದು ನದಿಗಳು ಉಕ್ಕಿ ಹರಿಯುತ್ತಿವೆ. ಲೋಕೋಪಯೋಗಿ ಇಲಾಖೆಯಲ್ಲಿ 30 ಮಿ.ಮೀ., ಕೃಷಿ ಸಂಶೋಧನಾ ಕೇಂದ್ರದಲ್ಲಿ 30.6 ಮೀ.ಮೀ, ತಾಲ್ಲೂಕಿನ ಸೌಂದಲಗಾ ಗ್ರಾಮದಲ್ಲಿ 24 ಮಿ.ಮೀ. ಮತ್ತು ಗಳತಗಾ ಗ್ರಾಮದಲ್ಲಿ 17.2 ಮಿ.ಮೀ. ಮಳೆಯಾಗಿದೆ.

ತಾಲ್ಲೂಕಿನಲ್ಲಿ ವೇದಗಂಗಾ ಹಾಗೂ ದೂಧಗಂಗಾ ನದಿಗಳಿಗೆ ನಿರ್ಮಿಸಿದ ಭೋಜವಾಡಿ-ಕುನ್ನೂರ, ಭೋಜ-ಕಾರದಗಾ, ಅಕ್ಕೋಳ-ಸಿದ್ನಾಳ, ಜತ್ರಾಟ ಭಿವಶಿ, ಹುನ್ನರಗಿ-ಮಮದಾಪೂರ, ಕುನ್ನೂರ-ಬಾರವಾಡ, ಸೇತುವೆಗಳು ಇನ್ನೂ ಜಲಾವೃತಗೊಂಡಿವೆ.

‘ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮತ್ತು ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾದ ಪರಿಣಾಮ ತಾಲ್ಲೂಕಿನ ವಿವಿಧೆಡೆ ಕಬ್ಬು ಮೊದಲಾದ ಬೆಳೆಗಳು ಜಲಾವೃತವಾಗಿವೆ. ಇನ್ನೂ ಎರಡು-ಮೂರು ದಿನ ಮಳೆ ಹೀಗೆಯೇ ಮುಂದುವರೆದಲ್ಲಿ ಪ್ರವಾಹ ಸಾಧ್ಯತೆಗಳಿದ್ದು ಎಲ್ಲ ಸಕಲ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ’ ಎಂದು ತಹಶೀಲ್ದಾರ್‌ ವಿಜಯ ಕಡಕೋಳ ತಿಳಿಸಿದರು.

ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಬಳಿ ವೇದಗಂಗಾ ನದಿಯ ದೃಶ್ಯ.
ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಬಳಿ ವೇದಗಂಗಾ ನದಿಯ ದೃಶ್ಯ.
ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಬಳಿ ವೇದಗಂಗಾ ನದಿಯ ದೃಶ್ಯ..
ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಬಳಿ ವೇದಗಂಗಾ ನದಿಯ ದೃಶ್ಯ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT