ಶುಕ್ರವಾರ, ನವೆಂಬರ್ 27, 2020
24 °C

‘ಪಂಚಮಸಾಲಿ ಶ್ರೀಗಳ ಮಾತು ಗೌರವ ತರುವಂಥದ್ದಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ: ‘ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಅವರು ಬೆಂಬಲಿಸುತ್ತಿರುವುದು ಗೌರವ ತರುವಂಥದ್ದಲ್ಲ’ ಎಂದು ಪಂಚಮಸಾಲಿ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಕಲ್ಲೋಳಿಯ ಈರಪ್ಪ ಬೆಳಕೂಡ ಹೇಳಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಸಮಾಜ ಪ್ರತಿನಿಧಿಸುವ ಸ್ವಾಮೀಜಿಗಳು ಎಲ್ಲರನ್ನೂ ಸಮನಾಗಿ ಕಾಣಬೇಕು. ರಾಜಕೀಯ ಮಾಡುವಂತಾದರೆ ಸ್ವಾಮೀಜಿಗಳಿಗೆ ಯಾವ ಬೆಲೆ ಬರುತ್ತದೆ?’ ಎಂದು ಕೇಳಿದ್ದಾರೆ.

‘ಸಿಬಿಐ ತನ್ನ ಕಾರ್ಯ ನಿರ್ವಹಿಸುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೆ, ಇಡೀ ಪಂಚಮಸಾಲಿ ಸಮಾಜವನ್ನು ವಿನಯ ಕುಲಕರ್ಣಿ ಅವರಿಗೆ ಅರ್ಪಿಸಿದಂತೆ ಮಾತನಾಡುವ ಸ್ವಾಮೀಜಿಗಳು ಸಮುದಾಯದ ಗೌರವಕ್ಕೆ ಚ್ಯುತಿ ತರುತ್ತಿದ್ದಾರೆ’ ಎಂದು ದೂರಿದ್ದಾರೆ.

‘ಕೊಲೆಯಾದ ಯೋಗೀಶಗೌಡ ಗೌಡರ ಕೂಡ ಸಮಾಜದವರೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳದೆ, ಮಾಜಿ ಮಂತ್ರಿ ಎನ್ನುವ ಕಾರಣಕ್ಕೆ ವಿನಯ ಪರ ವಾದಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಸ್ವಾಮೀಜಿಗಳು ಯೋಚಿಸಬೇಕು’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.