ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌; ಜನಸಂಚಾರ ವಿರಳ

Last Updated 6 ಏಪ್ರಿಲ್ 2020, 16:34 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೋವಿಡ್‌– 19 ಪೀಡಿತರ ಜೊತೆ ಸಂಪರ್ಕ ಹೊಂದಿದ್ದರೆನ್ನಲಾದ 18 ಜನರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಜಿಲ್ಲಾಡಳಿತವು ಕಳುಹಿಸಿಕೊಟ್ಟಿದೆ.

ಬೆಳಗಾವಿ, ಬೆಳಗುಂದಿ, ಹಿರೇಬಾಗೇವಾಡಿ ಹಾಗೂ ರಾಯಬಾಗದಲ್ಲಿ ಒಟ್ಟು 7 ಜನರು ಕೋವಿಡ್‌ ಸೋಂಕಿತರಾಗಿದ್ದಾರೆ. ಇವರ ಟ್ರಾವೆಲ್‌ ಹಿಸ್ಟರಿ ಹಾಗೂ ನಿಕಟ ಸಂಪರ್ಕಕ್ಕೆ ಬಂದಿರಬಹುದು ಎನ್ನಲಾದವರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಜನ ಸಂಚಾರ ವಿರಳ:

ಜಿಲ್ಲೆಯಲ್ಲಿ ಏಳು ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಜನರ ಸಂಚಾರ ವಿರಳವಾಗಿದೆ. ಲಾಕ್‌ಡೌನ್‌ ಗಂಭೀರತೆಯನ್ನು ಜನರು ಅರಿತುಕೊಂಡಂತಾಗಿದೆ. ಔಷಧಿ ಅಂಗಡಿಗಳು, ಸರ್ಕಾರಿ ಆಸ್ಪತ್ರೆಗಳು, ಹಣ್ಣು– ತರಕಾರಿ ಅಂಗಡಿಗಳು ತೆರೆದಿದ್ದವು. ತುರ್ತು ಸೇವೆಗಳು ಲಭ್ಯವಾಗಿದ್ದವು.

ವಿರೋಧ:

ನಗರದ ಜನನಿಬಿಡ ಪ್ರದೇಶವಾದ ಖಡೇಬಜಾರ್‌ದ ಲಾಡ್ಜ್‌ಗಳಲ್ಲಿ ಕೊರೊನಾ ಶಂಕಿತರನ್ನು ಕ್ವಾರಂಟೈನ್‌ ಮಾಡಬಾರದೆಂದು ಪಾಂಗೂಳ ಗಲ್ಲಿಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.

‘ಲಾಡ್ಜ್‌ಗಳಲ್ಲಿ ಇಡಲಾಗಿರುವವರನ್ನು ಕೂಡಲೇ ಊರ ಹೊರಗೆ ಸಾಗಿಸಬೇಕು. ಈ ಪ್ರದೇಶಗಳಲ್ಲಿ ಮಕ್ಕಳು, ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿದೆ. ತಕ್ಷಣ ಶಂಕಿತರನ್ನು ಬೇರೆಡೆ ಸಾಗಿಸಬೇಕು’ ಎಂದು ನಿವಾಸಿಗಳು ದೂರಿದರು.

ಸುತ್ತುಬಳಸಿ ಸಂಚಾರ:

ನಗರದ ಒಳರಸ್ತೆಗಳನ್ನು ಕೆಲವು ಸ್ಥಳೀಯರೇ ಬಂದ್‌ ಮಾಡಿದ್ದರಿಂದ ಜನರು ಸುತ್ತುಬಳಸಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಯಿತು.

ಕ್ಯಾಂಪ್‌ ಮಾರ್ಗ ಬದಲಾವಣೆ:

ಕ್ಯಾಂಪ್‌ ಪ್ರದೇಶದ 3 ಕಿ.ಮೀ. ಅಂತರದವರೆಗಿನ ಪ್ರದೇಶವನ್ನು ನಿಷೇಧಿತ ಪ್ರದೇಶ
ಹಾಗೂ 2 ಕಿಮೀ. ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಜಿಲ್ಲಾಧಿಕಾರಿ ಘೋಷಣೆ ಮಾಡಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ಎಸ್‌. ಲೋಕೇಶಕುಮಾರ್‌ ಪ್ರಕಟಣೆ ನೀಡಿದ್ದಾರೆ.

ಅಗತ್ಯ ವಸ್ತುಗಳ ಸರಬರಾಜು ಮಾಡುವ ಹಾಗೂ ತುರ್ತು ಸೇವೆ ಒದಗಿಸುವ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.
* ಕ್ಯಾಂಪ್‌ ಪ್ರದೇಶ ಪ್ರವೇಶಿಸುವ ವಾಹನಗಳಿಗೆ ನಗರದ ಚನ್ನಮ್ಮ ಸರ್ಕಲ್ ಗಣೇಶ ಮಂದಿರ ಹಿಂದೆ ಮಿಲನ್‌ ಹೊಟೇಲ್ ಮೂಲಕ ಸಂಚರಿಸಬಹುದು.

* ಜಿಲ್ಲಾ ಆಸ್ಪತ್ರೆ ಸುತ್ತ ಮುತ್ತಲೂ ಅಗತ್ಯ ವಸ್ತುಗಳ ಸರಬರಾಜು ಮಾಡುವ ಮತ್ತು ತುರ್ತು ಸೇವೆ ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

* ಚನ್ನಮ್ಮಾ ಸರ್ಕಲ್ ದಿಂದ ಪೀರಣವಾಡಿ ಕಡೆಗೆ ಹಾಗೂ ಪೀರನವಾಡಿಯಿಂದ ಚನ್ನ ಮ್ಮ ಸರ್ಕಲ್ ಕಡೆಗೆ ಸಂಚರಿಸುವವರು ಆರ್‌ಟಿಓ ಸರ್ಕಲ್, ಕಿಲ್ಲಾಕೆರೆ ಅಶೋಕ ಪಿಲ್ಲರ್‌, ಸರ್ಕಿಟ್ ಹೌಸ್, ಜೀಜಾಮಾತಾಸರ್ಕಲ್, ದೇಶಪಾಂಡೆ ಪೆಟ್ರೋಲ್ ಪಂಪ್, ಪಿಂಪಳ ಕಟ್ಟಾ, ಶನಿ ಮಂದಿರ, ಕಪಿಲೇಶ್ವರ ಓವರ ಬ್ರಿಜ್, ಬ್ಯಾಂಕ ಆಫ್ ಇಂಡಿಯಾ, ಮಹಾತ್ಮಾ ಫುಲೆ ರಸ್ತೆ, ಗೋವಾ ವೇಸ್, ಆರ್‌ಪಿಡಿ ಸರ್ಕಲ್, 3ನೇ
ರೇಲ್ವೆ ಗೇಟ್‌, ಪೀರನವಾಡಿ ಮಾರ್ಗವನ್ನು ಬಳಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT