ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರಾಟೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ

Published : 24 ಜನವರಿ 2024, 12:59 IST
Last Updated : 24 ಜನವರಿ 2024, 12:59 IST
ಫಾಲೋ ಮಾಡಿ
Comments

ಬೈಲಹೊಂಗಲ: ಪಟ್ಟಣದ ತಿರಂಗಾ ಕರಾಟೆ ಅಕಾಡೆಮಿ ವಿದ್ಯಾರ್ಥಿಗಳು ಮಹಾರಾಷ್ಟ್ರದ ಅಹಮದ ನಗರದಲ್ಲಿ ಜ.21, 22 ರಂದು ನಡೆದ ರಿಪಬ್ಲಿಕ್ ಕಪ್ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿ ಅಮೋಘ ಪ್ರದರ್ಶನ ನೀಡಿ ಜಯಶಾಲಿಗಳಾಗಿದ್ದಾರೆ.

7 ವರ್ಷದೊಳಗಿನ ಸ್ಪರ್ಧೆಯಲ್ಲಿ ಕಾರ್ತಿಕೆಯ್ ಸುಣಗಾರ, ಗೃಹಿತ ಮೂಗವೀರ ಬಂಗಾರದ ಪದಕ, 13 ವರ್ಷದೊಳಗಿನ ಸ್ಪರ್ಧೆಯಲ್ಲಿ ಶಿವಶಂಕರ ಬಡಿಗೇರ, ಚಿನ್ಮಯ ಸವದಿ ಬಂಗಾರದ ಪದಕ, 15 ವರ್ಷದೊಳಗಿನ ಸ್ಪರ್ಧೆಯಲ್ಲಿ ನಿಕೇತನ ಕುಡಸೋಮನ್ನವರ, ಶಮಿತ ದೇವಲಾಪುರ, ಅಕ್ಷಯ್ ಮೇಟ್ಯಾಲ ಬಂಗಾರದ ಹಾಗೂ ಬೆಳ್ಳಿ ಪದಕ, 16 ವರ್ಷದೊಳಗಿನ ಸ್ಪರ್ಧೆಯಲ್ಲಿ ಸಾಹಸ ಕಡಕೋಳ, ಬಾಳೇಶ ಅಲಾರವಾಡ ಬಂಗಾರದ ಪದಕ ಪಡೆದಿದ್ದಾರೆ.

ಸ್ಪರ್ಧೆಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ತಮಿಳನಾಡು, ಪಂಜಾಬ, ಹರಿಯಾಣ , ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ತಿರಂಗಾ ಅಕಾಡೆಮಿಯ ಸುಹಾಸ ವಕ್ಕುಂದ ತರಬೇತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT