ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಜೈ ಕಿಸಾನ್‌ ಮಾರುಕಟ್ಟೆ ವಿರುದ್ಧದ ಪಿಐಎಲ್‌ ತಿರಸ್ಕಾರ

Published 6 ಫೆಬ್ರುವರಿ 2024, 16:09 IST
Last Updated 6 ಫೆಬ್ರುವರಿ 2024, 16:09 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಜೈ ಕಿಸಾನ್‌ ಸಗಟು ತರಕಾರಿ ಮಾರುಕಟ್ಟೆ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ತಿರಸ್ಕರಿಸಿದೆ.

ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಮತ್ತು ಇತರ ಐವರು ಕರ್ನಾಟಕ ಹೈಕೋರ್ಟ್‌ನಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಧಿಕಾರಿ, ಬೆಳಗಾವಿ ಮಹಾನಗರ ಪಾಲಿಕೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಕೃಷಿ ಇಲಾಖೆಯಿಂದ ಜೈ ಕಿಸಾನ್‌ ಸಗಟು ಮಾರುಕಟ್ಟೆಗೆ ಅಕ್ರಮವಾಗಿ ಅನುಮತಿ ನೀಡಲಾಗಿದೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈಚೆಗೆ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್‌ ಈ ಅರ್ಜಿಯನ್ನು ತಿರಸ್ಕಾರ ಮಾಡಿದೆ.

ಇದೇ ವಿಷಯವಾಗಿ 2017ರಲ್ಲಿ ಮೊಹಮ್ಮದ್ ರಫೀಕ್ ಖಾನಾಪುರಿ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಾನೇ ನೀಡಿದ ಹಿಂದಿನ ಆದೇಶಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಜೈ ಕಿಸಾನ್‌ ಸಗಟು ತರಕಾರಿ ಮಾರುಕಟ್ಟೆಗೆ ನೀಡಿದ ಕಟ್ಟಡದ ಅನುಮತಿಯನ್ನು ಪ್ರಶ್ನಿಸಲು ನ್ಯಾಯಾಲಯವು ಯಾರಿಗೂ ಸ್ವಾತಂತ್ರ್ಯವನ್ನು ಕಾಯ್ದಿರಿಸಿಲ್ಲ ಎಂದು ಹೇಳಿದೆ.

2020ರಲ್ಲಿ ಇತರ 15 ವ್ಯಕ್ತಿಗಳು ಸಲ್ಲಿಸಿದ ಇತರ ಎರಡು ಸಾರ್ವಜನಿಕ ಹಿತಾಸಕ್ತಿಗಳನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು. ಅದನ್ನು ಮಾರ್ಚ್ 1, 2021ರ ಆದೇಶದಲ್ಲಿ ವಜಾಗೊಳಿಸಲಾಯಿತು. ಅದರಲ್ಲಿ ಅರ್ಜಿದಾರರು ರೈತರ ಪರವಾದ ದಾವೆದಾರರಲ್ಲ. ಆದರೆ, ಪ್ರಸ್ತುತ ಅರ್ಜಿದಾರರು ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ತಡವಾಗಿ ಮತ್ತು ಜೈ ಕಿಸಾನ್ ತರಕಾರಿ ಮಾರುಕಟ್ಟೆ ವಿರುದ್ಧ ಕೇಸ್ ನಂತರ ಕೇಸ್ ದಾಖಲಿಸಲಾಗಿದೆ ಮತ್ತು ಪಿಐಎಲ್‌ಗಳನ್ನು ಸಲ್ಲಿಸಿದವರಲ್ಲಿ ಅನೇಕರು ವ್ಯಾಪಾರಿಗಳೂ ಆಗಿದ್ದಾರೆ.

ಪ್ರಸ್ತುತ ಅರ್ಜಿಯನ್ನು ವಿಳಂಬವಾಗಿ ಸಲ್ಲಿಸಲಾಗಿದೆ ಎಂದು ಹೈಕೋರ್ಟ್ ಗಮನಿಸಿದೆ. ಕೃಷಿಕರು ಎಂದು ಹೇಳಿಕೊಳ್ಳುವ ಅರ್ಜಿದಾರರು ತಮ್ಮ ಜಮೀನುಗಳನ್ನು ಘೋಷಿಸಿಲ್ಲ ಮತ್ತು ಜೈ ಕಿಸಾನ್ ವಿರುದ್ಧ ನಕಲಿ ಮತ್ತು ವಂಚನೆ ಆರೋಪವಿದ್ದರೂ, ಯಾವುದೇ ದಾಖಲೆ ವಿವರಗಳು ಲಭ್ಯವಿಲ್ಲ ಮತ್ತು ಹಿಂದಿನ ಪಿಐಎಲ್‌ಗಳಲ್ಲಿ ಅಂತಹ ಯಾವುದೇ ಆರೋಪಗಳನ್ನು ಮಾಡಲಾಗಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT