ಶನಿವಾರ, ಅಕ್ಟೋಬರ್ 23, 2021
25 °C

ತಲ್ಲೂರ: ಮಳೆಗಾಗಿ ಪ್ರಾರ್ಥಿಸಿ ಪಲ್ಲಕ್ಕಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಲ್ಲೂರ: ‘ಭಕ್ತರು ಹಾಗೂ ಅಭಿಮಾನಿಗಳ ನೆರವು–ಸಹಕಾರದಿಂದ ಮಠಗಳು ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಅವರ ಭಕ್ತಿ–ನಿಷ್ಠೆ ಶಕ್ತಿಯಾಗಿದೆ’ ಎಂದು ವೇದಮೂರ್ತಿ ಬಸಯ್ಯಜ್ಜ ಹೇಳಿದರು.

ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದಲ್ಲಿ ‘ಉತ್ತರಿ ಹಸ್ತ’ ಮಳೆಗಾಗಿ ಪ್ರಾರ್ಥಿಸಿ ಸೋಮವಾರ ನಡೆದ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯ ಪ್ರಾಮಾಣಿಕವಾಗಿ ದುಡಿಯಬೇಕು. ಗಳಿಸಿದ ಹಣದಲ್ಲಿ ಅಲ್ಪ ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕು. ಸದ್ವಿಚಾರಗಳನ್ನು ಮೈಗೂಡಿಸಿಕೊಂಡು ಪರೋಪಕಾರಿಯಾಗಿ ಬಾಳುವುದು ಮುಖ್ಯವಾಗುತ್ತದೆ. ಅದನ್ನು ಕಲಿಯಬೇಕು’ ಎಂದರು.

ದೇವಸ್ಥಾನದಲ್ಲಿ ರುದ್ರಾಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಪಂಚಾಮೃತ, ಹೋಮ-ಹವನ ನೆರವೇರಿತು. ಬಸವಣ್ಣನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ವೀರಭದ್ರೇಶ್ವರ ದೇವಸ್ಥಾನವರೆಗೆ ಭಜನಾ ಮೇಳಗಳೊಂದಿಗೆ ಮರವಣಿಗೆ ನಡೆಸಲಾಯಿತು. ಬಳಿಕ ಮಹಾಪ್ರಸಾದ ವಿತರಿಸಲಾಯಿತು.

ನಂದಿಮಠದ ಬಾಳಯ್ಯಜ್ಜ, ಮುಖಂಡರಾದ ಬಾಬುಗೌಡಾ ಅಣ್ಣಿಗೇರಿ, ಮಹಾಂತೇಶ ಗೌಡರ, ಮಹಾಂತೇಶ ಮಠಪತಿ, ಈರಯ್ಯ ಹಿರೇಮಠ, ಬಸಪ್ಪ ಉಪ್ಪಿನ, ಯಲ್ಲಪ್ಪ ಮಡಿವಾಳರ, ಬಸವರಾಜ ಕಾಜಗಾರ, ಕರಬಸಪ್ಪ ಲಕ್ಕನ್ನವರ, ಸಾತವೀರಪ್ಪ ಶಿಲವಂತರ, ಮಹಾಂತೇಶ ಹೋಳಿ, ಬಸಪ್ಪ ಉಪ್ಪಾರ, ದ್ಯಾಮನ್ನ ಮುಕ್ಕಾನಿ, ದರಮೇಂದ್ರ ದುಂಡನಕೊಪ್ಪ, ವಿಠ್ಠಲ ಬಡಿಗೇರ, ಶಿವಪ್ಪ ಕಲಗುಡಿ, ಧರ್ಮೇಶ ಚಿಕಾಕಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.