ರಾಮದುರ್ಗ: ಕಾಶ್ಮೀರ ಕಣಿವೆಯಲ್ಲಿ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರನ್ನು ಗುಂಡು ಹಾರಿಸಿ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ ಅವರಿಗೆ ಮನವಿ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಘಟನೆ ನಡೆದ ದಿನ ಭಾರತಕ್ಕೆ ವಾಪಸ್ ಆಗಿ ಸರ್ವ ಪಕ್ಷಗಳ ಮುಖಂಡರ ಸಭೆ ಮಾಡಿ ನಂತರ ಚುನಾವಣೆ ಕಾರ್ಯಕ್ಕೆಂದು ಬಿಹಾರಕ್ಕೆ ಹೋಗಿರುವುದು ಖಂಡನೀಯ ಎಂದು ದಲಿತ ಮುಖಂಡ ಬಿ.ಆರ್. ದೊಡಮನಿ ಕಿಡಿ ಕಾರಿದರು.

‘ಪ್ರವಾಸಕ್ಕೆ ಹೋಗಿರುವ ಜನರ ಪ್ರಾಣ ಕಾಪಾಡಿದ್ದು ಅಲ್ಲಿಯ ಮುಸ್ಲಿಂ ವ್ಯಾಪಾರಿಗಳು. ಕೇಂದ್ರದ ಗೃಹ ಮಂತ್ರಿ, ಪ್ರಧಾನ ಮಂತ್ರಿ ಈ ಕುರಿತು ಮಾತನಾಡುತ್ತಿಲ್ಲ. ಒಂದು ಧರ್ಮವನ್ನು ಮುಂದಿಟ್ಟುಕೊಂಡು ಅವರ ಮೇಲೆ ಗೂಬೆ ಕೂರಿಸುವ ಜಾತಿವಾದದ ಲೆಕ್ಕ ಸರಿಯಲ್ಲ’ ಎಂದು ಅಂಜುಮನ್ ಇಸ್ಲಾಂ ಕಮಿಟಿಯ ಮಹಮ್ಮದಶಫಿ ಬೆಣ್ಣಿ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಸಂಘಟನೆಯ ಮುಖಂಡರಾದ ನಾಗಪ್ಪ ಸಂಗೊಳ್ಳಿ, ಅಂಜುಮನ್ ಇಸ್ಲಾಂ ಕಮಿಟಿಯ ಶಬ್ಬೀರಹ್ಮದ ಖಾಜಿ, ದಲಿತ ಸಂಘರ್ಷ ಸಮಿತಿಯ ರವಿ ಪಾಟೀಲ, ಸಮುದಾಯ ಘಟಕದ ರಾಜು ಶಲವಡಿ, ಶಶಿಕಾಂತ ನೆಲ್ಲೂರ, ತುಳಸಮ್ಮ ಮಾಳದಕರ, ರುಕ್ಮವ್ವ ಬಿಜ್ಜನ್ನವರ, ಡಬ್ಬಾ ಅಂಗಡಿಯ ಫಾರೂಖ್ ಶೇಖ್, ಅಂಜುಮನ್ ಕಮಿಟಿಯ ಪೈರೋಜ್ ಪಠಾಣ, ರಾಜೇಸಾಬ ಮುಲ್ಲಾ ಮತ್ತು ಬಸೀರಹ್ಮದ ರೋಣ ಹಾಜರಿದ್ದರು.

ವಿಶ್ವ ಹಿಂದೂ ಪರಿಷತ್ತಿನಿಂದಲೂ ಪ್ರತಿಭಟನೆ: ಪಹಲ್ಗಾಮ್ ಪ್ರದೇಶದಲ್ಲಿ ಹಿಂದೂಗಳನ್ನು ಪತ್ತೆ ಹಚ್ಚಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳು ಪ್ರತಿಭಟಿಸಿ ತಹಶೀಲ್ದಾರ್ ಸಂಜಯ ಕಾಜಗಾರ ಅವರಿಗೆ ಮನವಿ ಸಲ್ಲಿಸಿದರು.

ಕಾಶ್ಮೀರದಲ್ಲಿ ಶಾಂತಿ ನೆಲೆಸಿರುುದನ್ನು ಸಹಿಸದ ಉಗ್ರರು ಮನುಷ್ಯತ್ವ ಮರೆತು ಗುಂಡು ಹಾರಿಸಿದ್ದಾರೆ. ಹಿಂಸೆಯ ಬೀಜ ಬಿತ್ತುವವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಪವಿತ್ರ ಜನಿವಾರವನ್ನು ತೆಗೆದು ಹಾಕಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿದವು.

ವಿಶ್ವ ಹಿಂದು ಪರಿಷತ್ತಿನ ಪ್ರಕಾಶ ಸೂಳಿಭಾವಿ, ವಿ.ಕೆ. ಜೋಶಿ, ಅಮರ ಧೂತ್, ಎಸ್.ಎನ್. ಕುರಡಗಿ ಇತರರು ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.