ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಮಳೆ: ಕಾರಿನ ಮೇಲೆ ಬಿದ್ದ ಮರ

Published 12 ಏಪ್ರಿಲ್ 2024, 14:05 IST
Last Updated 12 ಏಪ್ರಿಲ್ 2024, 14:05 IST
ಅಕ್ಷರ ಗಾತ್ರ

ಬೆಳಗಾವಿ: ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಒಂದು ತಾಸಿನವರೆಗೆ ಉತ್ತಮ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ 5ರ ಸುಮಾರಿಗೆ ಆರಂಭವಾದ ಮಳೆ ಗುಡುಗು– ಮಿಂಚಿನ ಜತೆಗೆ ಸುರಿಯಿತು.

ಇಲ್ಲಿನ ಅನಗೋಳ ಪ್ರದೇಶದಲ್ಲಿರುವ ಸಂತ ಮೀರಾ ಶಾಲೆಯ ಬಳಿ ಮಳೆ, ಗಾಳಿಯ ರಭಸಕ್ಕೆ ಮರವೊಂದು ಬುಡಸಮೇತ ಕಿತ್ತು ಕಾರಿನ ಮೇಲಿ ಬಿದ್ದಿದೆ. ಕಾರು ಜಖಂಗೊಂಡಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಮಹಾದ್ವಾರ ರಸ್ತೆ, ಭೋವಿ ಗಲ್ಲಿಯಲ್ಲಿ ರಸ್ತೆ ಮೇಲೆ ಹರಿದ ನೀರು ವ್ಯಾಪಾರ– ವಹಿವಾಟಿಗೆ ತೊಂದರೆ ಮಾಡಿದೆ. ಕ್ಯಾಂಪ್‌ ಪ್ರದೇಶದಲ್ಲಿ ರಸ್ತೆಯ ಮಧ್ಯದಲ್ಲೇ ಡಾಂಬರ್‌ ಕಿತ್ತುಕೊಂಡು ಬಂದಿದೆ.

ಉಳಿದಂತೆ ರಾಮದುರ್ಗ, ರಾಯಬಾಗ, ಬೈಲಹೊಂಗಲ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT