ಶನಿವಾರ, ಫೆಬ್ರವರಿ 4, 2023
28 °C

‘ಕನ್ನಡಿಗರ ಕೈಗೆ ಉದ್ಯೋಗ ಸಿಗಲಿ’: ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂಕೇಶ್ವರ: ಕನ್ನಡದಲ್ಲಿ ಕಲಿತವರಿಗೆ ಉದ್ಯೋಗಗಳು ಸಿಕ್ಕಾಗ ಮಾತ್ರ ಭಾಷೆ ಬೆಳೆಯಲು ಸಾಧ್ಯ ಎಂದು ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಕರೆ ನೀಡಿದರು.

ಇಲ್ಲಿಗೆ ಸಮೀಪದ ಕಣಗಲಾದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ಮನೆ-ಮನೆಗಳಿಗೂ ಕನ್ನಡ ಸಾಹಿತ್ಯದ ಪುಸ್ತಕಗಳು ಸಿಗುವಂತಾಗಬೇಕು. ಮಕ್ಕಳು ಕನ್ನಡ ಸಾಹಿತ್ಯದ ಆಸ್ವಾದನೆಯನ್ನು ಪಡೆಯಬೇಕು’ ಎಂದರು.

ಕನ್ನಡ ಪರ ಹೋರಾಟಗಾರ ಪ್ರಮೋದ ಹೊಸಮನಿ ಅವರು ಮಾತನಾಡಿ, ‘ಕನ್ನಡವೇ ನಮ್ಮ ಧರ್ಮ, ಕನ್ನಡವೇ ನಮ್ಮ ದೇವಾಲಯ, ಕನ್ನಡಮ್ಮನೇ ನಮ್ಮ ದೇವರು ’ಎಂದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಮಹೇಶ ಹಟ್ಟಿಹೋಳಿ ಅವರು ಮಾತನಾಡಿ, ‘ಕನ್ನಡ ನೆಲ, ನುಡಿ, ಜಲದ ವಿಚಾರ ಬಂದಾಗ ಎಲ್ಲ ಕನ್ನಡಿಗರು ಒಂದಾಗಬೇಕು’ ಎಂದರು.

ಹಿರಿಯ ಕವಿ ಕಾಡೇಶ ಬಸ್ತವಾಡಿ ಅವರು ಮಾತನಾಡಿ, ಯುವ ಲೇಖಕರು ಸ್ಥಳಿಯ ಭಾಷೆಯನ್ನು ಬಳಸಿಕೊಂಡು ಸಾಹಿತ್ಯ ರಚನೆ ಮಾಡಬೇಕು ಎಂದರು.

ಸಮಾರಂಭದಲ್ಲಿ ಪಿ.ಎಸ್.ಐ ಶಿವರಾಜ ನಾಯಿಕವಾಡಿ, ಬಸವರಾಜ ನಾಯಿಕ, ರಮೇಶ ನಾಯಿಕ, ಶಂಕರ ಕಲ್ಯಾಣಿ, ವಿನಾಯಕ ಮುಂತಾದವರು ಉಪಸ್ಥಿತರಿದ್ದರು. ಪ್ರೊ.ವಿಜಯಲಕ್ಷ್ಮಿ ಮಿರ್ಜಿ ಸ್ವಾಗತಿಸಿದರು. ಸುನೀಲ ಹಿರೇಮಠ ವಂದಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು