ಬೆಳಗಾವಿ: ಸಮೀಪದ ರಾಣಿ ಚನ್ನಮ್ಮ ಮೃಗಾಲಯಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ಭೇಟಿ ನೀಡಿ, ಕೃಷ್ಣಮೃಗಗಳ ಸಾವಿನ ಕುರಿತು ವಿವರ ಪಡೆದರು. ಮೃಗಾಲಯದ ಪ್ರಾಣಿಗಳ ಪಾಲನೆ- ಪೋಷಣೆ ಬಗ್ಗೆ ಪರಿಶೀಲನೆ ನಡೆಸಿ, ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
.ಬೆಳಗಾವಿ | ಮತ್ತೊಂದು ಕೃಷ್ಣಮೃಗ ಸಾವು; ಸಾವಿನ ಸಂಖ್ಯೆ 31ಕ್ಕೆ ಏರಿಕೆ.
ಕೃಷ್ಣ ಮೃಗಾಯಲಕ್ಕೆ ಬಂದ ಈ ಕಾಯಿಲೆ ಬೇರೆ ಪ್ರಾಣಿಗಳಿಗೆ ತಗಲುವ ಸಾಧ್ಯತೆ ಇದ್ದರೆ, ಮುಂಜಾಗೃತೆಯಿಂದ ವೈದ್ಯಕೀಯ ಚಿಕಿತ್ಸೆ ನೀಡಿ ಎಂದು ಸಚಿವ ಸೂಚಿಸಿದರು. ಈ ಸೋಂಕು ಬೇರೆ ಪ್ರಾಣಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಸಚಿವರಿಗೆ ಸ್ಪಷ್ಟನೆ ನೀಡಿದರು.
.ಬೆಳಗಾವಿ: ಮುಂದುವರಿದ ಕೃಷ್ಣಮೃಗಗಳ ಸಾವಿನ ಸರಣಿ– ಕಾರಣ ಏನು?.
ಬೆಂಗಳೂರಿನಿಂದ ಬಂದ ನುರಿತ ವೈದ್ಯರ ತಂಡ ಮೃಗಾಯದಲ್ಲಿ ಕೃಷ್ಣಮೃಗಗಳ ಚಿಕಿತ್ಸೆ ನೀಡಿದೆ. ಈ ಕಾಯಿಲೆ ಬಗ್ಗೆ ಲಾಬ್ ನಿಂದ ವರದಿ ಕೂಡ ಪಡೆಯಲಾಗಿದೆ. ಸದ್ಯ ಇರುವ ಹುಲಿ, ಸಿಂಹಗಳ ಸೇರಿದಂತೆ ಇನ್ನುಳಿದ ಪ್ರಾಣಿಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಿ ಪ್ರಾಣಿಗಳ ಆರೋಗ್ಯ ಕಾಪಾಡಲು ಎಲ್ಲಾ ಕ್ರಮಗಳನ್ನು ಕೈಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.

ಬೆಳಗಾವಿ ಎಸಿಎಪ್ ನಾಗರಾಜ ಬಾಳೇಹೂಸೂರ, ಕರ್ನಾಟಕ ಮೃಗಾಯದ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್, ಸಿಸಿಎಫ್ ಮಂಜುನಾಥ ಚವ್ಹಾನ , ಡಿಎಪ್ಓ ಕ್ರಾಂತಿ ಎನ್. ಇ, ವೈದ್ಯರಾದ ಪ್ರಯಾಗ್ ಹಾಗೂ ಮೃಗಾಲಯದ ಸಿಬ್ಬಂದಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.