ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೀಘ್ರವೇ ದಿನಾಂಕ ಪ್ರಕಟ’

ಆರ್‌ಸಿಯು: ಎಂಬಿಎ ಮರು ಪರೀಕ್ಷೆ
Last Updated 29 ಜೂನ್ 2018, 15:54 IST
ಅಕ್ಷರ ಗಾತ್ರ

‌ಬೆಳಗಾವಿ: ‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎಂಬಿಎ 1ನೆ ಸೆಮಿಸ್ಟರ್‌ನ 2 (ಮ್ಯಾನೇಜೆರಿಯಲ್ ಎಕನಾಮಿಕ್ಸ್, ಎಂಟರ್‌ಪ್ರೈನರ್‌ಶಿಪ್‌ ಡೆವಲಪ್‌ಮೆಂಟ್) ಹಾಗೂ 3ನೇ ಸೆಮಿಸ್ಟರ್‌ನ (ಸ್ಟ್ರಾಟೆಜಿಕ್ ಮ್ಯಾನೇಜ್‌ಮೆಂಟ್) ವಿಷಯದ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ರಂಗರಾಜ ವನದುರ್ಗ ತಿಳಿಸಿದ್ದಾರೆ.

‘ಈ ಪರೀಕ್ಷೆಗಳನ್ನು ಇದೇ ವರ್ಷದ ಫೆಬ್ರುವರಿ/ಮಾರ್ಚ್‌ನಲ್ಲಿ ನಡೆಸಲಾಗಿತ್ತು. ಆದರೆ, ಕೆಲ ‍ಪ್ರಶ್ನೆಪತ್ರಿಕೆಗಳಲ್ಲಿ ಗೊಂದಲ ಹಾಗೂ ದೋಷಗಳಿವೆ ಎಂದು ಎಂಬಿಎ ಕಾಲೇಜಿನ ಮುಖ್ಯಸ್ಥರು ದೂರು ಸಲ್ಲಿಸಿದ್ದರು. ಸಿಂಡಿಕೇಟ್‌ ಸಭೆ ಸೂಚನೆ ಮೇರೆಗೆ, ಸತ್ಯಾಸತ್ಯತೆ ತಿಳಿಯಲು ತಜ್ಞರ ಸಮಿತಿ ರಚಿಸಲಾಗಿತ್ತು. ದೋಷಗಳಿರುವುದು ಖಚಿತವಾದ್ದರಿಂದ, ಮರು ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ದೋಷಕ್ಕೆ ಕಾರಣವಾದ ಪ್ರಾಧ್ಯಾಪಕರ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿದೆ. ಅವರನ್ನು ಪರೀಕ್ಷಾ ಮಂಡಳಿ ಹುದ್ದೆಯಿಂದ ಬದಲಾಯಿಸಲಾಗಿದೆ. ಮರುಪರೀಕ್ಷೆ ನಡೆಸಲು ಸಿಂಡಿಕೇಟ್‌ ಸಭೆ ನಿರ್ದೇಶನ ನೀಡಿದೆ. ಮೂರು ವಿಷಯಕ್ಕೆ ಮಾತ್ರ ಮರು ಪರೀಕ್ಷೆ ನಡೆಸಲಾಗುವುದು. ಇನ್ನುಳಿದ ಎಲ್ಲ ವಿಷಯಗಳ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿಸಿ, ಫಲಿತಾಂಶ ಸಿದ್ಧಪಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಎಂಬಿಎ ಅದ್ಯಯನ ವಿಭಾಗದ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಪಡುವ ಅಗತ್ಯವಿಲ್ಲ. ಇದು 1ನೇ ಹಾಗೂ 3ನೇ ಸೆಮಿಸ್ಟರ್ ಪರೀಕ್ಷೆಗೆ ಸಂಬಂಧಿಸಿದ್ದಾಗಿದೆ. ವಿದ್ಯಾರ್ಥಿಗಳು ಇನ್ನೂ 2 ಹಾಗೂ 4ನೇ ಸೆಮಿಸ್ಟರ್‌ ಪರೀಕ್ಷೆ ಪೂರೈಸಿಲ್ಲ. ಹೀಗಾಗಿ, ಪದವಿ ಪೂರ್ಣಗೊಳ್ಳಲು ಕಾಲಾವಕಾಶವಿದೆ. ನಿಯಮಾನುಸಾರ ಪದವಿ ಪೂರೈಸಲು ಸಹಕಾರ ನೀಡಲಾಗುವುದು. ಫಲಿತಾಂಶದಲ್ಲಿ ವ್ಯತ್ಯಾಸವಾಗಲು ಅವಕಾಶ ಕೊಡುವುದಿಲ್ಲ. ನಿಗದಿತ ಅವಧಿಯೊಳಗೆ ಫಲಿತಾಂಶ ಪ್ರಕಟಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ.

‘ಮರು ಪರೀಕ್ಷೆ ವೇಳಾಪಟ್ಟಿ ಸಿದ್ಧಪಡಿಸಿ ಪ್ರಾಂಶುಪಾಲರೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ದಿನಾಂಕ ನಿಗದಿಪಡಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT