ಮೂಡಲಗಿ: ತಾಲ್ಲೂಕಿನ ಕಲ್ಲೋಳಿ ಬಳಿಯಲ್ಲಿ ರಾಜ್ಯಸಭೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಹಾಗೂ ಕರ್ನಾಟಕ ನೀರಾವರಿ ನಿಗಮದ ಅನುದಾನದಡಿ ಜತ್ತ ಜಾಂಬೋಟಿ ರಸ್ತೆಯಿಂದ ಕೃಷಿ ಸಂಶೋಧನಾ ಕೇಂದ್ರದ ಕೌಂಪೌಂಡ್ವರೆಗೆ ಕಾಲುವೆ ಪಕ್ಕದ ಸೇವಾ ರಸ್ತೆ ಅಭಿವೃದ್ಧಿಯ ಕಾಮಗಾರಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಕಡಾಡಿ ಅವರು, ‘ನೀರಾವರಿ ಇಲಾಖೆಗೆ ಸಂಬಂಧಪಟ್ಟ ರಸ್ತೆಗಳು ನೇರವಾಗಿ ರೈತರು ಹೆಚ್ಚು ಉಪಯೋಗಿಸುವ ರಸ್ತೆಗಳಾಗಿದ್ದು, ಅವುಗಳನ್ನು ಅಭಿವೃದ್ಧಿ ಪಡಿಸಿದರೆ ರೈತರ ಸರಕು ಸಾಗಾಣಿಕೆಗೆ ಹೆಚ್ಚು ಅನುಕೂಲವಾಗಲಿದೆ ಇದರಿಂದ ಉತ್ಪಾದಕ ವಲಯಕ್ಕೆ ಹೆಚ್ಚು ಆದ್ಯತೆ ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಕಾಮಗಾರಿಗೆ ಆದ್ಯತೆ ನೀಡಲಾಗಿದೆ’ ಎಂದರು.

ಕರ್ನಾಟಕ ನೀರಾವರಿ ನಿಗಮ ಜಿಎಲ್ಬಿಸಿ ಉಪವಿಭಾಗ–1 ಘಟಪ್ರಭಾ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದುಂಡಪ್ಪ ಜಕ್ಕಾನಟ್ಟಿ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಬಾಳಪ್ಪ ಸಂಗಟಿ, ಸೋಮನಿಂಗ ಹಡಗಿನಾಳ, ಸಿದ್ದಪ್ಪ ಹೆಬ್ಬಾಳ, ಮಲ್ಲಿಕಾರ್ಜುನ ಹುಲೆನ್ನವರ, ಅಡಿವೆಪ್ಪ ಕುರಬೇಟ, ಹಣಮಂತ ಸಂಗಟಿ, ಗುರುನಾಥ ಮದಭಾಂವಿ, ತುಕಾರಾಮ ಪಾಲ್ಕಿ, ಮಲ್ಲಪ್ಪ ಹೆಬ್ಬಾಳ, ಶಿವಾನಂದ ಹೆಬ್ಬಾಳ, ಅಜೀತ ಚಿಕ್ಕೋಡಿ ಹಣಮಂತ ಕೌಜಲಗಿ, ಶಂಕರ ಕಡಾಡಿ, ಮಲ್ಲಿಕಾರ್ಜುನ ಮುಂಡಿಗನಾಳ, ಶಿವಲಿಂಗ ಕುಂಬಾರ, ದಸಗೀರ ಕಮತನೂರ, ಸಂಜು ಕಳ್ಳಿಗುದ್ದಿ, ಗುತ್ತಿಗೆದಾರ ಈರಣ್ಣ ಮುನ್ನೋಳಿಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.