ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಜ.6ರಂದು ರೋಟರಿ ಸಂಸ್ಥೆಯ ರಜತ ಮಹೋತ್ಸವ

Published 4 ಜನವರಿ 2024, 16:16 IST
Last Updated 4 ಜನವರಿ 2024, 16:16 IST
ಅಕ್ಷರ ಗಾತ್ರ

ಅಥಣಿ: ರೋಟರಿ ಸಂಸ್ಥೆಯ ರಜತ ಮಹೋತ್ಸವವು ಜ.6 ಮತ್ತು 7ರಂದು ನಡೆಯಲಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ಸಂಸ್ಥೆ ಮೂಲಕ ಶಾಲೆಗಳಿಗೆ ಶೌಚಾಲಯ, ಶುದ್ದಕುಡಿಯುವ ನೀರು, ಡೆಸ್ಕ್, ಕಂಪ್ಯೂಟರ್ ಮತ್ತು ಪರಿಕರಗಳನ್ನು ಕೊಡುವ ಕೆಲಸ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯ ಮಾಡಿದ್ದೇವೆ’ ಎಂದರು.

ಈ ಕಾರ್ಯಕ್ರಮ ಸ್ಮರಣೀಯ ಮಾಡುವ ನಿಟ್ಟಿನಲ್ಲಿ ಜ. 6 ಮತ್ತು 7 ರಂದು ಜೆ.ಎ. ಹೈಸ್ಕೂಲ್ ಆವರಣದಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ ಎಂದರು.

ಶನಿವಾರ ಜನವರಿ 6 ರಂದು‌ ಮೋಟಗಿ ಮಠ ಸ್ವಾಮಿಜಿ ಸಾನಿಧ್ಯದಲ್ಲಿ ಸತೀಶ್ ಜಾರಕಿಹೋಳಿ  ಕಾರ್ಯಕ್ರಮ ಉದ್ಘಾಟಿಸುವರು. ಕೆ.ಎ ವನಜೋಳ, ವಾಮನ ಪಾರ್ಥನಳ್ಳಿ ಭಾಗವಹಿಸುವರು.

ಹಾಸ್ಯ ಕಲಾವಿದರಾದ ಪ್ರಾಣೇಶ , ನರಸಿಂಹ ಜೋಶಿ , ಮಹಾಮನೆ ಅವರ ಕಾರ್ಯಕ್ರಮ ನಡೆಸಲಿದ್ದಾರೆ. ಜ.7ರಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಅಥಣಿ ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜು ಕಾಗೆ ಭಾಗವಹಿಸುವರು.

ಸಾಂಸ್ಕ್ರತಿಕ ಸಂಭ್ರಮ ಕಾರ್ಯಕ್ರಮ‌ವೂ ನಡೆಯಲಿದೆ ಎಂದು ತಿಳಿಸಿದರು.

ರೋಟರಿ ಅಧ್ಯಕ್ಷ ಅನೀಲ ದೇಶಪಾಂಡೆ, ಕಾರ್ಯದರ್ಶಿ ಅರುಣ ಸೌದಾಗರ ಹಾಗೂ ಮಾಜಿ ಅಧ್ಯಕ್ಷ ಸಂತೋಷ ಭೊಮ್ಮನ್ನವರ, ಮೇಘರಾಜ ಪರಮಾರ, ಅರುಣ್ ಯಲಗುದ್ರಿ, ಅರುಣ ಸೌದಾಗರ, ಶೇಖರ ಕೋಲಾರ, ಅಮೃತ ಕುಲಕರ್ಣಿ, ಆನಂದ ಗುಂಜಿಗಾಂವಿ, ಸಚೀನ್ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT