ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ | ದೇವಸ್ಥಾನಗಳಿಗೆ ₹3.60 ಕೋಟಿ ಅನುದಾನ: ಶಾಸಕ ಗಣೇಶ ಹುಕ್ಕೇರಿ

Published : 9 ಮಾರ್ಚ್ 2024, 13:41 IST
Last Updated : 9 ಮಾರ್ಚ್ 2024, 13:41 IST
ಫಾಲೋ ಮಾಡಿ
Comments

ಚಿಕ್ಕೋಡಿ: 2023-24ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನ (ಮುಜರಾಯಿ) ಅಡಿಯಲ್ಲಿ ಚಿಕ್ಕೋಡಿ-ಸದಲಗಾ ಮತಕ್ಷೇತ್ರದ 22 ಗ್ರಾಮಗಳ ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ₹3.60 ಕೋಟಿ ಬಿಡುಗಡೆ ಮಾಡಲಾಗಿದೆ.

ಕಾಡಾಪುರದ ಕೇದಾರೇಶ್ವರ ದೇವಸ್ಥಾನಕ್ಕೆ ₹5 ಲಕ್ಷ, ಇಂಗಳಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ₹30 ಲಕ್ಷ, ನೇಜ ಗ್ರಾಮದ ಹಾಲಸಿದ್ಧೇಶ್ವರ ದೇವಸ್ಥಾನಕ್ಕೆ ₹15 ಲಕ್ಷ, ಜನವಾಡದ ಮಹಾದೇವ ಸ್ವಾಮಿ ಧರ್ಮಮಠಕ್ಕೆ ₹20 ಲಕ್ಷ, ಪಟ್ಟಣಕುಡಿಯ ದತ್ತ ದೇವಾಲಯಕ್ಕೆ ₹10 ಲಕ್ಷ, ಗಿರಗಾಂವದ ಹನುಮಾನ ದೇವಾಲಯಕ್ಕೆ ₹6 ಲಕ್ಷ, ಯಕ್ಸಂಬಾ ಪಟ್ಟಣದ ಶಿವರಾಮ ಕಾರಂತ ನಗರದ ಹನುಮಾನ ದೇವಸ್ಥಾನಕ್ಕೆ ₹7 ಲಕ್ಷ, ಶಿರಗಾಂವದ ಹನುಮಾನ ದೇವಸ್ಥಾನಕ್ಕೆ 7 ಲಕ್ಷ, ಚಿಕ್ಕೋಡಿ ಪಟ್ಟಣದ ಮರಗುಬಾಯಿ ದೇವಸ್ಥಾನಕ್ಕೆ ₹10 ಲಕ್ಷ, ಮಲಿಕವಾಡದ ಬಸವೇಶ್ವರ ದೇವಾಲಯಕ್ಕೆ ₹50 ಲಕ್ಷ, ಪಟ್ಟಣದ ಮಾಳಿ ಸಮಾಜ ಸೇವಾ ಸಂಘದ ಸಮುದಾಯ ಭವನಕ್ಕೆ ₹20 ಲಕ್ಷ, ಧುಳಗಣವಾಡಿಯ ಹನುಮಾನ ಮಂದಿರಕ್ಕೆ ₹15 ಲಕ್ಷ ಅನುದಾನ ಬಂದಿದೆ.

ನೇಜದ ಕಾಡಸಿದ್ಧೇಶ್ವರ ದೇವಸ್ಥಾನಕ್ಕೆ ₹20 ಲಕ್ಷ, ಖಡಕಲಾಟದ ಆಡಿ ಸಿದ್ಧೇಶ್ವರ ಅಪ್ಪನವರ ಮಠಕ್ಕೆ ₹15 ಲಕ್ಷ, ಯಕ್ಸಂಬಾ ಪಟ್ಟಣದ ಗುರುದೇವ ದತ್ತ ಮಂದಿರಕ್ಕೆ ₹10 ಲಕ್ಷ, ಹಂಡ್ಯಾನವಾಡಿಯ ಹಾಲಸಿದ್ದನಾಥ ಮಂದಿರಕ್ಕೆ ₹10 ಲಕ್ಷ, ವಡಗೋಲದ ಬೀರಸಿದ್ದೇಶ್ವರ ದೇವಸ್ಥಾನಕ್ಕೆ ₹50 ಲಕ್ಷ, ಚಿಕ್ಕೋಡಿ ಪಟ್ಟಣದ ಹೊಸಪೇಠ ಗಲ್ಲಿಯ ಮೈಲಿ ಲಕ್ಷ್ಮೀದೇವಿ ದೇವಸ್ಥಾನಕ್ಕೆ ₹30 ಲಕ್ಷ, ತೋರನಹಳ್ಳಿಯ ಹನುಮಾನ ದೇವಸ್ಥಾನಕ್ಕೆ ₹10 ಲಕ್ಷ, ಅಂಕಲಿಯ ರಾಘವೇಂದ್ರ ಸೇವಾ ವಿಶ್ವಸ್ಥ ಮಂಡಳಿಗೆ ₹5 ಲಕ್ಷ, ಶಿರಗಾಂವದ ಸೋಮೇಶ್ವರ ದೇವಸ್ಥಾನಕ್ಕೆ ₹10 ಲಕ್ಷ, ಅಂಕಲಿಯ ಗಣೇಶ ದೇವಸ್ಥಾನಕ್ಕೆ ₹5 ಲಕ್ಷ ಅನುದಾನ ಮಂಜೂರಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT