ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಭೀಮಗಡ ಅಭಯಾರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿದ ಕೆಲವು ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಯುವಜನರು ಅರಣ್ಯಕ್ಕೆ ನುಗ್ಗಿ, ಮೋಜು– ಮಸ್ತಿ ಮಾಡುವುದು ಮುಂದುವರಿದೇ ಇದೆ. ವನ್ಯಮೃಗಗಳಿಗೆ, ವನಸಂಪತ್ತು, ಮಹದಾಯಿ ನದಿಗೆ ಆತಂಕ ಎದುರಾಗುವ ಕೃತ್ಯಗಳನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

15ಕ್ಕೂ ಹೆಚ್ಚು ಯುವಕರ ದಂಡು ಅಭಯಾರಣ್ಯದ ಮಡಿಲಲ್ಲಿ ಇರುವ ವಜ್ರಪೋಹಾ ಜಲಪಾತಕ್ಕೆ ತೆರಳಿ ಗದ್ದಲ ಮಾಡಿದೆ. ಜಲಪಾತಕ್ಕೆ ಇಳಿದು ನೀರಿನಲ್ಲಿ ಜಿಗಿದಾಡಿ, ಸ್ಪರ್ಧೆ ಏರ್ಪಡಿಸಿ, ಮದ್ಯ ಸೇವಿಸಿ, ಲೌಡ್ಸ್ಪೀಕರ್ನಲ್ಲಿ ಹಾಡು ಹಾಕಿ ನೃತ್ಯ ಮಾಡಿದ್ದಾರೆ. ಅಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿದ್ದಾರೆ. ಇದೆಲ್ಲವನ್ನೂ ವಿಡಿಯೊ ಮಾಡಿಕೊಂಡು ಇನ್ಸ್ಟಾಗ್ರಾಮ್ನಲ್ಲಿ ಹರಿಬಿಟ್ಟಿದ್ದಾರೆ. ಆದರೆ, ಅವರನ್ನು ಬಂಧಿಸುವಲ್ಲಿ ಅಧಿಕಾರಿಗಳು ಹೆಜ್ಜೆ ಇಟ್ಟಿಲ್ಲ.

ಮಿತಿಮೀರಿದ ಹುಚ್ಚಾಟ: ಎಲ್ಲೆಂದರಲ್ಲಿ ಅಡುಗೆ ಮಾಡುವುದು, ಪ್ರವಾಸಿಗರ ಕೂಗಾಟ, ಚೀರಾಟ, ಸೆಲ್ಫಿ ತೆಗೆಸಿಕೊಳ್ಳಲು ಜಲಪಾತದ ಮೇಲೆಯೇ ಸ್ಪರ್ಧೆ ನಡೆದೇ ಇವೆ. ಈ ಜಲಪಾತ ನೂರಾರು ಅಡಿ ಆಳವಿದ್ದು, ಮುಳುಗಿದರೆ ಅಥವಾ ಜಲಪಾತದ ಮೇಲಿಂದ ಆಯ ತಪ್ಪಿದರೂ ಸಾವು ಖಚಿತ. ಆದರೂ ರೀಲ್ಸ್ ಮಾಡಿ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಮಾತ್ರ ನಿಂತಿಲ್ಲ.

ಅಪರೂಪದ ವನ್ಯಜೀವಿಗಳಾದ ವಿಶಿಷ್ಟ ರೋಟನ್ ಫ್ರೀ ಟೈಲ್ಡ್ ಬಾವಲಿಗಳು, ಹುಲಿ, ಕಪ್ಪು ಚಿರತೆ, ಕರಡಿ ಅಂತಹ ಅಪರೂಪದ ವನ್ಯಜೀವಿಗಳ ಸಂರಕ್ಷಣೆಗೆ ಈ ಪ್ರದೇಶವನ್ನು ‘ಪರಿಸರ ಸೂಕ್ಷ್ಮ ವಲಯ’ ಎಂದು ಗುರುತಿಸಿದ್ದರೂ ದಯನೀಯ ಸ್ಥಿತಿ ಬಂದಿದೆ.

ರಾಜ್ಯ ಸರ್ಕಾರವು ಭೀಮಗಡ ಅರಣ್ಯ ಪ್ರದೇಶವನ್ನು 2011ರಲ್ಲಿಯೇ ಅಭಯಾರಣ್ಯವೆಂದು ಅಧಿಸೂಚನೆ ಹೊರಡಿಸಿದೆ. ಸುತ್ತಲಿನ ಸೂಕ್ಷ್ಮ ಪ್ರದೇಶಗಳನ್ನು ಪರಿಸರ ಸಂರಕ್ಷಣಾ ಕಾಯ್ದೆ 1986ರಡಿ ಕಳೆದ ವರ್ಷ ‘ಪರಿಸರ ಸೂಕ್ಷ್ಮ ವಲಯ’ ಎಂದು ಕೇಂದ್ರ ಸರ್ಕಾರ ಕೂಡ ಅಧಿಸೂಚನೆ ಹೊರಡಿಸಿದೆ.

ಅಕ್ರಮ ಚಟುವಟಿಕೆಗಳನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಂತರ ಅನುದಾನ ನೀಡುತ್ತಿವೆ. ಆದರೆ ಅದು ಸಫಲವಾಗುತ್ತಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೂರಾರು ಪ್ರವಾಸಿಗರು ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರುವ ದಟ್ಟ ಅರಣ್ಯದೊಳಗೆ ಇರುವ ಮಹಾದಾಯಿ ನದಿಯ ವಜ್ರಪೋಹ ಜಲಪಾತಕ್ಕೆ ಅಕ್ರಮವಾಗಿ ನುಸುಳುವುದು, ಅಡುಗೆ ಮಾಡುವುದು, ಪ್ಲಾಸ್ಟಿಕ್ ಬಳಕೆ, ಜಲಪಾತ ಪ್ರದೇಶದಲ್ಲಿ ಹುಚ್ಚಾಟ ಆಡುವುದು ಸಾಮಾನ್ಯ ಸಂಗತಿ ಆಗಿದೆ.

ವಜ್ರಪೋಹ ಜಲಪಾತಕ್ಕೆ ತಲುಪಬೇಕೆಂದರೆ ಮಹದಾಯಿ ಕಣಿವೆಯ ದುರ್ಗಮ ಅರಣ್ಯ ಪ್ರದೇಶದಲ್ಲಿ 8 ಕಿ.ಮೀ ನಡಿಗೆಯಲ್ಲೇ ಕ್ರಮಿಸಬೇಕು. ಜಾಂಬೋಟಿ ಭಾಗದಿಂದ ಅರಣ್ಯ ಇಲಾಖೆಯ ಕಳ್ಳ ಬೇಟೆ ತಡೆ ಶಿಬಿರ ದಾಟಿಯೇ ಬರಬೇಕು. ಆದರೂ ನಿಯಮಿತವಾಗಿ ನೂರಾರು ಪ್ರವಾಸಿಗರು ಜಾಂಬೋಟಿ ಭಾಗದಿಂದ ಅಕ್ರಮ ಪ್ರವೇಶ ಮಾಡುತ್ತಿವುದಕ್ಕೆ ತಡೆ ಬಿದ್ದಿಲ್ಲ. ನಿರ್ಲಕ್ಷ್ಯ ವಹಿಸಿದವರ ಮೇಲೆ ಕ್ರಮ ಯಾವಾಗ ಎಂಬುದು ಪರಿಸರವಾದಿಗಳ ಪ್ರಶ್ನೆ.

4 ತಿಂಗಳಿಂದ ಕಠಿಣ ನಿಲುವು: ಡಿಎಫ್ಒ ‘ವಜ್ರಪೋಹ ಪ್ರವೇಶವನ್ನು ಅರಣ್ಯ ಸಿಬ್ಬಂದಿ ಕಳೆದ 4 ತಿಂಗಳಿನಿಂದ ಪರಿಶೀಲಿಸುತ್ತಿದ್ದಾರೆ. ಪ್ರತಿದಿನ ಪ್ರವಾಸಿಗರು ಮತ್ತು ಬೈಕ್ ಸವಾರರನ್ನು ಚಪೋಲಿ ಚೆಕ್ಪೋಸ್ಟ್ನಲ್ಲಿ ವಾಪಸ್ ಕಳುಹಿಸಲಾಗುತ್ತಿದೆ. ಜನವರಿ ಆರಂಭದಲ್ಲಿ ಮೀಸಲು ಅರಣ್ಯಕ್ಕೆ ಅತಿಕ್ರಮಣ ಮಾಡಿದವರ ವಿರುದ್ಧ ಖಾನಾಪುರ ವಲಯ ಅಧಿಕಾರಿ ಎಫ್ಐಆರ್ ದಾಖಲಿಸಿದ್ದಾರೆ. ಬಳಿಕ ಅಕ್ರಮ ಪ್ರವೇಶಗಳು ವರದಿಯಾಗಿಲ್ಲ’ ಎಂದು ಡಿಸಿಎಫ್ ಮರಿಯಾ ಕ್ರಿಸ್ತೊ ರಾಜಾ ಪ್ರತಿಕ್ರಿಯಿಸಿದ್ದಾರೆ. ‘ಸಾಮಾಜಿಕ ಜಾಲತಾಣಗಳಲ್ಲಿ ಈಚೆಗೆ ಹರಿದಾಡಿದ ವಿಡಿಯೊ ಚಪೋಲಿ ಗ್ರಾಮಸ್ಥರ ಸಂಬಂಧಿಕರದ್ದು ಎಂದು ಗೊತ್ತಾಗಿದೆ. ಗ್ರಾಮವು ಮೀಸಲು ಅರಣ್ಯದೊಳಗಿನ ಆವರಣವಾಗಿದೆ. ಅವರು ಕಳೆದ ವಾರಾಂತ್ಯದಲ್ಲಿ ಸ್ಥಳೀಯ ಧಾರ್ಮಿಕ ಉತ್ಸವಕ್ಕಾಗಿ ಬಂದಿದ್ದಾರೆ. ಗ್ರಾಮ ಪ್ರದೇಶದೊಳಗಿನಿಂದ ಜಲಪಾತಕ್ಕೆ ಪ್ರವೇಶ ಮಾಡಿದ್ದಾರೆ. ನಾವು ಅದರ ಬಗ್ಗೆ ತನಿಖೆ ನಡೆಸುತ್ತೇವೆ ಮತ್ತು ಅತಿಕ್ರಮಣಕಾರರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

ಸಚಿವರ ಸೂಚನೆಗೂ ಬೆಲೆ ಇಲ್ಲ ‘ಅಭಯಾರಣ್ಯದಲ್ಲಿ ಮೋಜು– ಮಸ್ತಿ ಮಾಡಿದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ತಪ್ಪಿತಸ್ಥರು ಹಾಗೂ ಅಕ್ರಮಕ್ಕೆ ಅವಕಾಶ ನೀಡಿದ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ಸ್ವತಃ ಅರಣ್ಯ ಸಚಿವ ಈಶ್ವರ ಖಂಡ್ರೆ ಜನವರಿಯಲ್ಲಿ ಲಿಖಿತ ಸೂಚನೆ ನೀಡಿದ್ದಾರೆ. ನಂತರವೂ ಹಿರಿಯ ಅಧಿಕಾರಿಗಳು ಬೆಳಗಾವಿ ವಿಭಾಗದ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಅಕ್ರಮ ಪ್ರವೇಶ ತಡೆಗೆ ಕಠಿಣ ಕ್ರಮ ಕೈಗೊಂಡಿಲ್ಲ’ ಎಂಬುದು ಸ್ಥಳೀಯರ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.