ಬೆಳಗಾವಿ: ‘ಮೈಕ್ರೊಫೈನಾನ್ಸ್ ಸಂಸ್ಥೆಯೊಂದು ಮಹಿಳೆಯರಿಗೆ ಸಾಲ ನೀಡಿ, ₹100 ಕೋಟಿ ವಂಚಿಸಿದೆ. ಇದರಿಂದ 15 ಸಾವಿರಕ್ಕೂ ಹೆಚ್ಚು ಮಹಿಳೆಯರು ವಂಚನೆಗೆ ಒಳಗಾಗಿದ್ದಾರೆ. ಈ ಪ್ರಕರಣದ ತನಿಖೆಗೆ ಮೂವರು ಪೊಲೀಸ್ ಅಧಿಕಾರಿಗಳ ತಂಡ ರಚಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಮೈಕ್ರೊಫೈನಾನ್ಸ್ನಿಂದ ಕಾಯ್ದೆ ಪ್ರಕಾರ ಸಾಲ ನೀಡಲಾಗಿದೆ. ಮಂಜೂರಾದ ಸಾಲದಲ್ಲಿ ಶೇ 50ರಷ್ಟು ಹಣಕಾಸು ಸಂಸ್ಥೆಯೇ ಉಳಿಸಿಕೊಂಡಿದೆ. ಮಹಿಳೆಯರು ಅರ್ಧದಷ್ಟು ಸಾಲ ಮಾತ್ರ ಮರುಪಾವತಿಸಿದರೆ ಸಾಕು ಎಂದು ಮೊದಲು ಹೇಳಿದ್ದಾರೆ. ಅದಕ್ಕೆ ಆಸೆಗೆ ಬಿದ್ದು ಮಹಿಳೆಯರು ಸಾಕಷ್ಟು ಸಾಲ ಪಡೆದಿದ್ದಾರೆ. ಆದರೆ, ಈಗ ಪೂರ್ಣ ಸಾಲ ಮರುಪಾವತಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರುಗಳು ಬಂದಿವೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಪೊಲೀಸರು ಮೋಸ ಮಾಡಿದ ಮಧ್ಯವರ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ಮಹಿಳೆಯರಿಗೆ ಮೈಕ್ರೊಫೈನಾನ್ಸ್ ಯಾವುದೇ ರೀತಿಯ ತೊಂದರೆ ನೀಡಬಾರದೆಂದು ಸೂಚಿಸಲಾಗಿದೆ’ ಎಂದು ತಿಳಿಸಿದರು.

ಶಾಸಕ ಆಸೀಫ್ ಸೇಠ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.