ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಟಗಿಮಠಗಾದ ಸ್ಥಿತಿ ಅರುಣಗಾಗದಿರಲಿ: ಲಕ್ಷ್ಮಣ ಸವದಿ

ಪ್ರಚಾರ ಸಭೆಯಲ್ಲಿ ವಿಧಾನಪರಿಷತ್‌ ಸದಸ್ಯ
Last Updated 27 ಮೇ 2022, 14:31 IST
ಅಕ್ಷರ ಗಾತ್ರ

ಅಥಣಿ: ‘ವಿಧಾನಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಮಹಾಂತೇಶ ಕವಟಗಿಮಠ ಅವರು ಸೋತಿದ್ದು ನಮ್ಮಿಂದಲೆ. ನಾವೆಲ್ಲರೂ ಒ‌ಗ್ಗಟ್ಟಾಗಿ ಕೆಲಸ ಮಾಡಿದಿದ್ದರೆ ಸೋಲುತ್ತಿರಲಿಲ್ಲ’ ಎಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿನ ಆರ್.ಎಚ್. ಕುಲಕರ್ಣಿ ಸಭಾಭವನದಲ್ಲಿ ವಿಧಾನಪರಿಷತ್‌ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ನಿಮಿತ್ತ ಬಿಜೆಪಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ನಾವೆಲ್ಲೂ ಒಟ್ಟಾದರೆ ಎಂತಹ ಚುನಾವಣೆಯಲ್ಲೂ ಗೆಲ್ಲಬಹುದು. ಆದರೆ, ನಾವೆಲ್ಲಾ ಒಗ್ಗಟ್ಟಾಗಿಲ್ಲ. ಇನ್ನಾದರೂ ನಾವು ಒಂದಾಗೋಣ. ಮಹಾಂತೇಶಗೆ ಅದ ಪರಿಸ್ಥಿತಿ ಅರುಣ ಶಹಾಪುರ ಹಾಗೂ ಹಣಮಂತ ನಿರಾಣಿ ಅವರಿಗೆ ಬಾರದಿರಲಿ’ ಎಂದು ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಅವರು ಹೇಳಿದರು.

‘ಅರುಣ ಜನಪರ ನಾಯಕ. ಅವರ ಮನೆಗೆ ಒಮ್ಮೆ ಹತ್ತು ಮಂದಿ ಹೋದರೆ ಕೂರುವುದಕ್ಕೆ ವ್ಯವಸ್ಥೆ ಇಲ್ಲ. ಹಣವಿದ್ದರೆ ರಾಜಕಾರಣ ಎನ್ನುವ ಪರಿಸ್ಥಿತಿಯಲ್ಲಿ ಅವರು ಮಾದರಿಯಾಗಿ ಕಾಣಿಸುತ್ತಾರೆ. ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಸಂಭಾವಿತ ರಾಜಕಾರಣಿಯಾಗಿದ್ದಾರೆ’ ಎಂದು ತಿಳಿಸಿದರು.

ಸವದಿ ಅವರು ತಮ್ಮ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದನ್ನು ಕಂಡು ಅರುಣ ಶಹಾಪುರ ವೇದಿಕೆಯಲ್ಲೇ ಬಿಕ್ಕಿಬಿಕ್ಕಿ ಅತ್ತರು.

‘ದೇವರ ಸಾಕ್ಷಿಯಾಗಿ ನಾವೆಲ್ಲರೂ ಪ್ರಾಮಾಣಿಕವಾಗಿ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ಬೆಳಗಾವಿ ಜಿಲ್ಲೆಯ ಜನರು ನನ್ನ ಕೈಬಿಡಲಿಲ್ಲ ಎಂಬ ಮಾತು ನಿನ್ನಿಂದಲೇ ಬರಲಿದೆ’ ಎಂದು ಶಹಾಪುರ ಅವರನ್ನು ಉದ್ದೇಶಿಸಿ ಸವದಿ ಹೇಳಿದರು.

ವಿಧಾನಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಮಾತನಾಡಿ, ‘ಕಾಂಗ್ರೆಸ್‌ನವರು ಆರ್‌ಎಸ್‌ಎಸ್‌ನವರಿಗೆ ಏಕೆ ಬೈಯುತ್ತಾರೆ ಎನ್ನುವುದು ಈವರೆಗೂ ತಿಳಿಯುತ್ತಿಲ್ಲ. ದೇಶಕ್ಕೆ ಉತ್ತಮ ನಾಯಕರನ್ನು ನೀಡಿದ್ದು ಆರ್‌ಎಸ್‌ಎಸ್‌. ಆ ನಾಯಕರ ಕುರಿತು ಪಠ್ಯಪುಸ್ತಕದಲ್ಲಿ ಹೆಸರು ಸೇರಿಸಬಾರದೇಕೆ?’ ಎಂದು ಕೇಳಿದರು.

ಸಚಿವ ಉಮೇಶ ಕತ್ತಿ ಮಾತನಾಡಿ, ‘ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್‌ ಅಭ್ಯರ್ಥಿ ಒಬ್ಬ ರಾಜಕಾರಣಿ. ಅವರು ಹೇಗೆ ಶಿಕ್ಷಕರ ಬಗ್ಗೆ ಕಾಳಜಿ ವಹಿಸಲು ಸಾಧ್ಯ? ಶಿಕ್ಷಕರ ಅಳಲು ಹೇಗೆ ಕೇಳುತ್ತಾನೆ?’ ಎಂದು ಪ್ರಕಾಶ ಹುಕ್ಕೇರಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಭ್ಯರ್ಥಿಗಳಾದ ಹಣಮಂತ ನಿರಾಣಿ ಹಾಗೂ ಅರುಣ ಶಹಾಪುರ ಮತಯಾಚನೆ ಮಾಡಿದರು.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಮಹೇಶ ಕುಮಠಳ್ಳಿ ಎನ್. ಮಹೇಶ್‌, ಶ್ರೀಮಂತ ಪಾಟೀಲ, ಪಿ.ರಾಜೀವ ಮಾತನಾಡಿದರು. ಮುಖಂಡರಾದ ಶಶಿಕಾಂತ ನಾಯಿಕ, ಉಜ್ವಲಾ ಬಡವನಾಚೆ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT