ನಿಪ್ಪಾಣಿ: ‘ನಿಪ್ಪಾಣಿ ವಿಧಾನಸಭಾ ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸುವುದು ನಮ್ಮ ಆದ್ಯ ಕರ್ತವ್ಯ ಮತ್ತು ಗುರಿಯಾಗಿದೆ. ಅದನ್ನು ಪ್ರಾಮಾಣಿಕವಾಗಿ ಜೊಲ್ಲೆ ಕುಟುಂಬವು ಮಾಡುತ್ತಿದೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದರೂ ₹1 ಕೋಟಿ ಅನುದಾನದಲ್ಲಿ ತಾಲ್ಲೂಕಿನ ಭಾಟನಾಂಗನೂರ-ಬೋರಗಾಂವವಾಡಿ ರಾಜ್ಯ ಹೆದ್ದಾರಿಯಲ್ಲಿ ತಡೆಗೋಡೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಈ ವಿಧಾನಸಭಾ ಕ್ಷೇತ್ರವು ತಮ್ಮ ಮನೆಯ ಮಗಳಾಗಿ ಗೌರವಿಸುತ್ತಾ ನಾಯಕತ್ವದ ಅವಕಾಶ ನನಗೆ ನೀಡಿತು. ಸತತ ಮೂರು ಬಾರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನಷ್ಠಾನಗೊಳಿಸಲಾಗಿದೆ. ಸಂಸ್ಕಾರ, ಸಂಸ್ಕೃತಿ ಮತ್ತು ಅಭಿವೃದ್ಧಿ ಮೂಲಕ ಜನ ಪರ ಸೇವೆ ಮುಂದುವರೆದಿದ್ದು, ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಾಗ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದರು.

ವಿನೋದ ಬೋಧಲೆ, ಸಂದೀಪ ಪಾಟೀಲ, ಪ್ರದೀಪ ಚೌಗುಲೆ, ದತ್ತಾರಾಜ ಹಂಸ, ಸಂಜಯ ದೇಸಾಯಿ, ಅರುಣ ಕೋಣೆ, ಸುಧಾಕರ ಚೌಗುಲೆ, ಡಾ. ಬಾಬಾಸಾಹೇಬ ಚೌಗುಲೆ, ಭಾಗೋಜಿ ಧನಗರ, ಪಿಂಟು ಪಾಟೀಲ, ಭೈರವನಾಥ ಪಾಟೀಲ, ರಾಮಚಂದ್ರ ಕೋಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.