ಭಾನುವಾರ, ಸೆಪ್ಟೆಂಬರ್ 25, 2022
30 °C

ಶ್ರಾವಣ ‍ಪ್ರವಚನ ಸಮಾರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಐಗಳಿ: ಇಲ್ಲಿನ ಸಿಂಧೂರ ವಸತಿಯ ಅಪ್ಪಯ್ಯ ಸ್ವಾಮಿಗಳ ದೇವಾಲಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಅಕ್ಕ ಮಹಾದೇವಿ ಚರಿತ್ರೆಯ ಪ್ರವಚನವು ಶುಕ್ರವಾರ ಮಂಗಲವಾಯಿತು.

ಕನ್ನಾಳದ ಬಸವಲಿಂಗ ಸ್ವಾಮೀಜಿ ಮಾತನಾಡಿ, ತಾಯಿ– ತಂದೆ, ಗುರು– ಹಿರಿಯರನ್ನು ಗೌರವಿಸಬೇಕು. ಮಕ್ಕಳಿಗೆ ಸಂಸ್ಕಾರ ಕೊಡಬೇಕು. ಅಪ್ಪಯ್ಯ ಸ್ವಾಮಿ ಸಮಿತಿಯವರು ಸಮಾನ ಮನಸ್ಕರಿದ್ದಾರೆ. ಇದೇ ಕಾರಣಕ್ಕೆ ದೇವಾಲಯ ಅಭಿವೃದ್ದಿ ಆಗಿದೆ ಎಂದರು.

ಪ್ರವಚನಕಾರ ಗೋಠೆಯ ಮಲ್ಲಿಕಾರ್ಜುನ ಶರಣರು ಮಾತನಾಡಿ, ಮಹಾದೇವಿ ಅಕ್ಕನ ಜನನ, ಜೀವನ, ವೈರಾಗ್ಯ, ವಚನಗಳ ಬೋಧನೆ ಕುರಿತು ವಿವರಿಸಿದರು.

ನಿತ್ಯ ಪ್ರಸಾದ ವ್ಯವಸ್ಥೆ ಕಲಿಸಿದ 40 ಜನರನ್ನು ದೇವಾಲಯದ ಸಮಿತಿಯಿಂದ ಸತ್ಕರಿಸಲಾಯಿತು. ಭೈರಪ್ಪ ಬಿಜ್ಜರಗಿ ವಿಶೇಷ ಪ್ರಸಾದ ವಿತರಿಸಿದರು.

ಟ್ರಸ್ಟ ಕಮಿಟಿ ಅಧ್ಯಕ್ಷ ನರಸಪ್ಪ ಸಿಂದೂರ, ಉಪಾಧ್ಯಕ್ಷ ಮಹಾದೇವ ಹಾಲಳ್ಳಿ, ಅಪ್ಪಾಸಾಬ್‌ ಪಾಟೀಲ, ಯಲ್ಲಪ್ಪ ಮಿರ್ಜಿ, ಶಿವಾನಂದ ಸಿಂದೂರ, ಗುರಪ್ಪ ಬಿರಾದಾರ, ಹಣಮಂತ ಕರಿಗಾರ, ಮಹಾದೇವ ಅಥಣಿ, ಪರಪ್ಪ ಹಾಲಳ್ಳಿ, ಚನ್ನಪ್ಪ ಸಿಂಧೂರ, ಬಸವರಾಜ ಬಿರಾದಾರ, ಸಿದ್ರಾಮ ಸಿಂಧೂರ, ಪಿ.ಡಿ.ಓ ರಾಜೇಂದ್ರ ಪಾಠಕ, ಡಾ.ಎಸ್.ಎಸ್.ಸನದಿ, ಗಣಪತಿ ಗುರವ ಅನೇಕರು.

ಸಂಗೋಲಿ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಚಾಲಕರಾಗಿ ಸೇವೆ ಸಲ್ಲಿಸಿದ ಕೇದಾರಿಗೌಡ ಬಿರಾದಾರ, ಮಲಗೌಡ ಪಾಟೀಲ, ಆರ್.ಆರ್.ಅಲಕುಂಟೆ, ಜಗದೀಶ ಕೊರಬು, ಸಹದೇವ ಕಾಳೆ ಅವರನ್ನು ಶೇಖರ ಬಿಜ್ಜರಗಿ ಸಹೋದರರು ಸತ್ಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.