ಶುಕ್ರವಾರ, ಅಕ್ಟೋಬರ್ 7, 2022
24 °C
ನವಿಲುತೀರ್ಥ; ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

‘ಸೈನಿಕರ ಸಾಹಸ ಯುವಕರಿಗೆ ಪ್ರೇರಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸವದತ್ತಿ: 1965ರ ಸೆಪ್ಟೆಂಬರ್‌ನಲ್ಲಿ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಆಧೀನಕ್ಕೊಳಪಟ್ಟ ಮಹಾರಾಜ ಕೆ ಗ್ರಾಮವನ್ನು ಯುದ್ಧದಿಂದ ಮರಳಿ ಪಡೆಯುವ ಸಂದರ್ಭದಲ್ಲಿ ಕರ್ನಲ್ ಹನಬರಲಾಲ್ ಮೆಹ್ತಾ, ಸುಬೇದಾರ ನಂಬಿಯಾರ್, ಸಿಪಾಯಿ ಕನ್ನನ್, ಸಿ.ಬಿ. ಪಾಟೀಲ ಸೇರಿ ಹುತಾತ್ಮರಾದ ಯೋಧರಿಗೆ ಗುರುವಾರ ನವಿಲುತೀರ್ಥದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಾಲ್ಕನೇ ಮದ್ರಾಸ್ ಬಟಾಲಿಯನ್‍ದಲ್ಲಿ ಸೇವೆ ಸಲ್ಲಿಸಿದ 55 ಮಾಜಿ ಸೈನಿಕರು ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ರೇಣುಕಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಗಿಲ್, ಪಂಜಾಬ ಸುವರ್ಣ ಸೌಧದಲ್ಲಿ ಅಡಗಿದ ಉಗ್ರರ ಸೆದೆಬಡಿದ, ಶ್ರೀಲಂಕಾ ಯುದ್ಧ, ಮೇಘಧೂತ, ಜಮ್ಮು ಕಾಶ್ಮೀರ, ಬಾಂಗ್ಲಾದೇಶ ಯುದ್ಧದಲ್ಲಿ ಭಾಗವಹಿಸಿದ ಕರ್ನಾಟಕ, ಆಂಧ್ರ ಪ್ರದೇಶ, ತಮಿಳನಾಡು, ಕೇರಳ ವೀರ ಯೋಧರು ಭಾಗಿಯಾಗಿ ತಮ್ಮ ಅನುಭವ ಹಂಚಿಕೊಂಡರು. ಹಿರೇಕುಂಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ರೀತ್‌ ಪರೇಡ್‌ನಲ್ಲಿ ಭಾಗವಹಿಸಿ ಗಮನ ಸೆಳೆದರು.

ಮಾಜಿ ಸೈನಿಕ ಬಿಇಒ ಎಸ್.ಸಿ.ಕರೀಕಟ್ಟಿ ಮಾತನಾಡಿ, ದೇಶದ ರಕ್ಷಣೆಗೆ ಸೈನಿಕರು ಸದಾ ಸನ್ನದ್ಧರಾಗಿರುತ್ತಾರೆ. ಸೈನಿಕ ಛಲ, ಸಾಹಸ, ಧೈರ್ಯ ಯುವಕರಿಗೆ ಪ್ರೇರಣೆ ಎಂದರು.

ಹಿರೇಕುಂಬಿ ಶಿಕ್ಷಕ ಹಾಗೂ ಮಾಜಿ ಸೈನಿಕ ರಮೇಶ ಪೂಜಾರಿ ಮಾತನಾಡಿ, ನಾಲ್ಕನೇ ಮದ್ರಾಸ್ ಬಟಾಲಿಯನ್‌ ಹಲವು ದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಪ್ರಖ್ಯಾತಿ ಪಡೆದಿದೆ. ಹುತಾತ್ಮರ ನೆನಪಿಗಾಗಿ ಪ್ರತಿ ವರ್ಷ ಮಹಾರಾಜ ಕೆ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ಬಿಇಒ ಎಸ್.ಸಿ. ಕರೀಕಟ್ಟಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು