ಮುನವಳ್ಳಿ: ‘ಶಿಕ್ಷಣ, ಯೋಗ, ಸಾಮಾಜಿಕ ಕಾರ್ಯದಲ್ಲಿ ಸೋಮಶೇಖರ ಮಠ ಮುಂಚೂಣಿಯಲ್ಲಿದೆ. ನನ್ನ ಅನುದಾನದಲ್ಲಿ ಇದೇ ವರ್ಷ ₹50ಲಕ್ಷ ನೀಡಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಸೋಮಶೇಖರ ಮಠದ ಮುರುಘೇಂದ್ರ ಶ್ರೀಗಳ 51ನೇ ಜನ್ಮದಿನೋತ್ಸವದ ಅಂಗವಾಗಿ ಮಂಗಳವಾರ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಮಾತನಾಡಿದರು.

ಕುಂದರಗಿಯ ಅಮರಸಿದ್ದೇಶ್ವರ ಶ್ರೀ ಮಾತನಾಡಿ, ‘ಮುರುಘೇಂದ್ರ ಶ್ರೀ, ಭಕ್ತರನ್ನೆಲ್ಲ ಒಗ್ಗೂಡಿಸಿಕೊಂಡು ಸಮಾಜಕ್ಕೆ ಉಪಯುಕ್ತವಾಗುವ ಕೆಲಸ ಮಾಡುತ್ತಿದ್ದಾರೆ’ ಎಂದರು.

ಮುರುಘೇಂದ್ರ ಶ್ರೀ ಮಾತನಾಡಿ, ‘ಮಠವು ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆಯಲು ಹಾನಗಲ್ ಕುಮಾರೇಶ್ವರರು ಪ್ರೇರಣೆ. ಭಕ್ತರೇ ಶ್ರೀಮಠದ ಶಕ್ತಿಯಾಗಿದ್ದಾರೆ’ ಎಂದರು.

ಪಂಚನಗೌಡ ದ್ಯಾಮನಗೌಡರ ಪ್ರಾಸ್ತಾವಿಕ ಮಾತನಾಡಿದರು. ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷ ಶ್ರೀ ಆಶೀರ್ವಚನ ನೀಡಿದರು.

ಅಮೀನಗಡದ ಪ್ರಭುಶಂಕರಾಜೇಂದ್ರ ಶ್ರೀ, ಸದಾಶಿವ ಶ್ರೀ, ಬೈಲಹೊಂಗಲದ ಪ್ರಭುನೀಲಕಂಠ ಶ್ರೀ, ಸತ್ಸಂಗ ಆಶ್ರಮದ ನಿತ್ಯಾನಂದ ಶ್ರೀ, ಗೊರವನಕೊಳ್ಳದ ಶಿವಾನಂದ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ರವೀಂದ್ರ ಯಲಿಗಾರ, ಚಂದ್ರು ಜಂಬ್ರಿ, ವಿರೂಪಾಕ್ಷ ಮಾಮನಿ, ಅರುಣಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಸೋಮಶೇಖರ ಯಲಿಗಾರ, ಶ್ರೀಕಾಂತ ನೇಗಿನಾಳ, ಈರಣ್ಣ ಸಂಕಣ್ಣವರ, ಡಾ.ಎಂ.ಬಿ.ಅಷ್ಟಗಿಮಠ, ಶಿಕ್ಷಕ ಬಿ.ಬಿ.ಹೂಲಿಗೊಪ್ಪ ಸೇರಿದಂತೆ ಅನೇಕರು ಇದ್ದರು.

ಅಂಗವಿಕಲ 61 ಹಿರಿಯರಿಗೆ ಊರುಗೋಲು, ಜೇವೂರು ಶಿಕ್ಷಣದ ಕಿವುಡು ಹಾಗೂ ಮೂಕ ಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಶಾಲಾ ಸಲಕರಣೆಗಳನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.